ಬೆಳ್ತಂಗಡಿ: ಶ್ರೀ ದುರ್ಗಾ ಬ್ಯಾಟರಿ ಸೋಲಾರ್ ಮತ್ತು ಆಟೋ ಎಲೆಕ್ಟ್ರಿಕಲ್ ವರ್ಕ್ಸ್ ಏ. 7 ರಂದು ಗುರುವಾಯನಕೆರೆ ಶಕ್ತಿನಗರ ಅರಮಲೆ ಬೆಟ್ಟದ ಸಮೀಪದ ದಿವ್ಯಶ್ರೀ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು. ಶ್ರೀನಿವಾಸ್ ಭಟ್ ಗೇರುಕಟ್ಟೆ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಮಳಿಗೆಯಲ್ಲಿ ಎಲ್ಲಾ ತರಹದ ವಾಹನಗಳ ಆಟೋ ವರ್ಕ್ಸ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುತ್ತದೆ. ಆಟೋ ಎಲೆಕ್ಟ್ರಿಕಲ್ ವರ್ಕ್ಸ್ ಜೊತೆಗೆ ಸೋಲಾರ್ ಅಳವಡಿಸಿಕೊಡಲಾಗುವುದು. ಗ್ರಾಹಕರಿಗೆ ಕ್ಲಪ್ತ ಸಮಯಕ್ಕೆ ಉತ್ತಮ ಸೇವೆ ನೀಡುವ ಉದ್ದೇಶ ನಮ್ಮ ಮಳಿಗೆಯದು. ಮುಂಬರುವ ದಿನಗಳಲ್ಲಿ ವಿನೂತನ ಯೋಜನೆಗಳ ಮೂಲಕ ಬ್ಯಾಟರಿ ಸೋಲಾರ್ ಖರೀದಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಾಲಕ ಲೋಕೇಶ್ ಪೂಜಾರಿ ಪಡಂಗಡಿ ತಿಳಿಸಿದರು.

ವೇಣೂರು ಎಸ್‌ಡಿಎಂ ಐಟಿ ಉಪನ್ಯಾಸಕ ಸತೀಶ್, ಮಾಲಕಿ ನಮಿತಾ ಲೋಕೇಶ್, ಉಜಿರೆ ಶ್ರೀ ಗುರು ರೇಡಿಮೆಡ್ ಮಾಲಕ ಯೋಗೀಶ್, ಯೋಧರ, ನವೀನ್, ಅಖಿಲ್ ಪ್ರವೀಣ್, ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.