38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗೇರುಕಟ್ಟೆ : ಪರಪ್ಪು ಜಮಾಅತಿನ ಎರಡು ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ಆಡಳಿತ ಸಮಿತಿ, ಕೆ.ಸಿ.ಎಫ್,ಕೆ.ಎಮ್.ಜೆ., ಎಸ್.ವೈ.ಎಸ್, ಎಸ್.ಎಸ್.ಎಫ್ ಹಾಗೂ ಜಮಾಅತರಿಂದ ಸಹಾಯಧನ ಹಸ್ತಾಂತರ

ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಎರಡು ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ವಿವಾಹ ನಿಶ್ಚಯವಾಗಿದ್ದು, ಈ ಮದುವೆಯನ್ನು ಇವರಿಗೆ ನೆರವೇರಿಸಲು ಕಷ್ಟಸಾದ್ಯವಾದದ್ದನ್ನು ಮನಗಂಡು ಪರಪ್ಪು ಜಮಾಅತ್ ನ ಆಡಳಿತ ಸಮಿತಿ, ಅಬುಧಾಬಿಯಲ್ಲಿ ಉದ್ಯೋಗದಲ್ಲಿರುವ ಗೇರುಕಟ್ಟೆಯ ಪಿ.ಎಸ್.ಮಹಮ್ಮದ್ ಮದನಿಯವರ ಮಗ ಸಲೀಕ್ ಎಂಬವರ ಮುತುವರ್ಜಿಯಿಂದ ಕೆ.ಸಿ.ಎಫ್ ಅಬೂಹದ್ರಿಯಾ ಘಟಕ, ಪರಪ್ಪು ಕೆ.ಎಮ್.ಜೆ, ಎಸ್.ವೈ.ಎಸ್, ಸ್ವಲಾತ್ ಸಮಿತಿ, ಎಸ್ ಎಸ್.ಎಫ್ ಹಾಗೂ ಜಮಾಅತರು ಸೇರಿಕೊಂಡು ಕ್ರೂಢಿಕರಿಸಿದ ನಗದನ್ನು ಎರಡು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಖತೀಬರಾದ ಎಫ್.ಎಚ್. ಮಹಮ್ಮದ್ ಮಿಸ್ಬಾಹಿ, ಕೆ. ಎಮ್.ಜೆ ಅಧ್ಯಕ್ಷ ಉಸ್ಮಾನ್ ಹಾಜಿ, ಎಸ್.ವೈ.ಎಸ್ ಅಧ್ಯಕ್ಷ ಸೈಫುಲ್ಲಾ,ಪಿ.ಎಸ್. ಮದನಿ, ಅಬ್ದುಲ್ ಖಾದರ್ ಹಾಜಿ, ಅಬೂಬಕ್ಕರ್ ಮರ್ಜೂಕಿ, ಮುಸ್ತಫ ಹಿಮಮಿ, ಎಸ್.ಎ.ಹಮೀದ್, ಇಹ್ ತಿಶಾಮ್ ಜಿ.ಎಚ್, ರಹಿಮಾನ್ ಮಾಸ್ಟರ್, ಉಮ್ಮರ್ ಜಿ ಎ, ಸಿದ್ದೀಕ್ ಜಿ.ಎಚ್., ನೌಷಾದ್, ಹಮೀದ್ ಜಿ.ಡಿ., ಇರ್ಫಾನ್ ಎಸ್, ಬಶೀರ್ ಎಸ್.ಎಮ್.ಎಸ್., ಸವಾದ್, ಮುಂತಾದವರು ಹಾಜರಿದ್ದರು.

Related posts

ಪೆರ್ಲ ಬೈಪಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ರಾಷ್ಟ್ರೀಯ ಯುವದಿನಾಚರಣೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಆರಂಬೋಡಿ ಗ್ರಾಮದ ಬೂತ್ ಪ್ರಗತಿ ಸಭೆ

Suddi Udaya

ನಡ: ಸರಕಾರಿ ಪ.ಪೂ. ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ಬಂದಾರು: ಕೋಡಿಮಜಲು ನಿವಾಸಿ ಕುಕ್ಕಪ್ಪ ಗೌಡ ನಿಧನ

Suddi Udaya

ಮೂಡುಕೋಡಿ ಉಂಬೆಟ್ಟು ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ, ಸಾಂತ್ವನ ನಿಧಿ, ಸನ್ಮಾನ ಕಾರ್ಯಕ್ರಮ

Suddi Udaya
error: Content is protected !!