ಬೆಳ್ತಂಗಡಿ: ಇಲ್ಲಿಯ ಸಂತೆಕಟ್ಟೆ ಬಳಿ ಅಡಿಕೆ ಅಂಗಡಿಯ ಶಟರ್ ಮುರಿದು ಕಳ್ಳರು ಒಳಗೆ ನುಗ್ಗಿದ ಘಟನೆ ಎ.7 ರಂದು ಮಧ್ಯರಾತ್ರಿ ಸಮಯ ನಡೆದಿದೆ.

ಬೆಳ್ತಂಗಡಿಯ ಸಂತೆಕಟ್ಟೆ ಬಳಿಯ ಸುಮುಖ ಟ್ರೇಡರ್‍ಸ್ ಸಂತೋಷ್ ಶೆಟ್ಟಿಯವರ ಅಡಿಕೆ ಅಂಗಡಿಗೆ ಮಧ್ಯರಾತ್ರಿ ಅಂಗಡಿಯ ಒಂದು ಬದಿಯ ಶಟರ್ ಮುರಿದು ಒಳ ಹೊಕ್ಕ ಕಳ್ಳರು ಅಂಗಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ.

ಇಂದು ಬೆಳಗ್ಗೆ ಶಟರ್ ಮುರಿದಿರುವುದು ಸ್ಥಳೀಯರು ನೋಡಿ ಮಾಲಕರಿಗೆ ವಿಷಯ ತಿಳಿಸಿದ್ದು, ಅವರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ ಠಾಣೆಯ ಪ್ರಮೋದ್, ಕುಶಾಲಪ್ಪ ಯಂ. ಶಿವಾನಂದ, ಗಿರೀಶ್, ಸ್ಥಳಕ್ಕೆ ಆಗಮಿಸಿದ್ದು, ಸುತ್ತ ಮುತ್ತ ಹಾಗೂ ಅಂಗಡಿಯಲ್ಲಿರುವ ಸಿ.ಸಿ. ಕ್ಯಾಮರ ಪರಿಶೀಲನೆ ಮಾಡಿದ್ದಾರೆ. ಮಧ್ಯ ರಾತ್ರಿ ಸುಮಾರು 1 ರಿಂದ 2 ಗಂಟೆ ಸುಮಾರಿಗೆ, ಮೂವರು ಸೇರಿ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.