April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕನ್ಯಾಡಿ 2 ಸ.ಉ.ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ

ಕನ್ಯಾಡಿ 2 ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಮೂರು ದಿನದ ಕಾರ್ಯಾಗಾರದಲ್ಲಿ ಲಘು ಸಂಗೀತ, ಧ್ಯಾನ ಕಥೆಗಳು ಮತ್ತು ಆಟಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಹಾರ್ಟ್ ಫುಲ್ ನೆಸ್ ಧ್ಯಾನ ಕೇಂದ್ರ ಕನ್ಯಾಡಿ 2 ಇಲ್ಲಿನ ಶ್ರೀಮತಿ ವತ್ಸಲಾ, ಶ್ರೀಮತಿ ಸಾವಿತ್ರಿ, ಶ್ರೀಮತಿ ವೀಣಾ, ಶ್ರೀಮತಿ ಸುಮತಿ, ಸಂಗೀತ ಶಿಕ್ಷಕರಾದ ಕಮಲಾಕ್ಷ ಗುಡಿಗಾರ ಇವರೆಲ್ಲರಿಂದ ಮಕ್ಕಳು ಹೆಚ್ಚು ವಿಷಯಗಳನ್ನು ಕಲಿತರು ಮತ್ತು ಅದರ ಪ್ರಯೋಜನವನ್ನು ಪಡೆದುಕೊಂಡರು.

ಸಮಾರೋಪ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಕೆ.ನಂದ , ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪಾಎನ್, ಶಾಲಾ ಶಿಕ್ಷಕ ವೃಂದ, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಸ್ವಾಗತಿಸಿ, ಶಾಲಾ ಶಿಕ್ಷಕಿ ಶ್ರೀಮತಿ ತೇಜಸ್ವಿ ಧನ್ಯವಾದವಿತ್ತರು, ಶಾಲಾ ಶಿಕ್ಷಕಿ ರಾಜಶ್ರೀ ನಿರೂಪಿಸಿದರು.

Related posts

ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಕಂಪ್ಯೂಟ‌ರ್ ತರಬೇತಿಯ ಪ್ರಮಾಣ ಪತ್ರ ವಿತರಣೆ

Suddi Udaya

ಬಂದಾರು: ಸಂಯೋಗ ಆಯುರ್ವೇದಾಲಯ ಶುಭಾರಂಭ

Suddi Udaya

ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪೊಲೀಸ್ ದೂರು

Suddi Udaya

ಹೊಸಂಗಡಿ ಶೌರ್ಯ ‌ವಿಪತ್ತು ನಿರ್ವಹಣಾ ಘಟಕದಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನಾಟಿ

Suddi Udaya

ತುಂಡಾಗಿ ರಸ್ತೆಗೆ ಬಿದ್ದ ವಿದ್ಯುತ್ ತಂತಿ: ತಪ್ಪಿದ ಅನಾಹುತ

Suddi Udaya

ರಾಜ್ಯಮಟ್ಟದ ಕರಾಟೆ: ಕಾಯರ್ತಡ್ಕ ದಿವ್ಯಜ್ಯೋತಿ ಆಂ.ಮಾ. ಶಾಲೆಯ ಅಡ್ಲಿನ್ ಎಲಿಜಬೆತ್ ಜೆರಿನ್ ಗೆ ಚಿನ್ನದ ಪದಕ

Suddi Udaya
error: Content is protected !!