September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಸೀಟು ಬಳಿಯ ಸಿಸಿ ಕ್ಯಾಮೆರಾ ಎಗರಿಸಿದ ಕಳ್ಳರು

ಬೆಳ್ತಂಗಡಿ: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ರಕ್ಷಿತಾರಣ್ಯದ ಬಸ್ಟ್ಯಾಂಡ್ ಪಕ್ಕದಲ್ಲಿ ಪಂಚಾಯತ್ ವತಿಯಿಂದ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾವನ್ನು ಎ.9 ರಂದು ರಾತ್ರಿ ಯಾರೋ ಕಳ್ಳರು ಎಗರಿಸಿದ್ದಾರೆ.


ಒಂದು ತಿಂಗಳ ಹಿಂದೆ ಗ್ರಾಮದ ಆಯ್ದ ನಾಲ್ಕು ಕಡೆ ಸೂಕ್ಷ್ಮ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಆಧಾರಿತ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.
ತಿಂಗಳ ಅಂತರದಲ್ಲೇ ಇದೀಗ ಒಂದು ಕ್ಯಾಮರಾವನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಗ್ರಾಮದಲ್ಲಿ ಅಲ್ಲಲ್ಲಿ ತ್ಯಾಜ್ಯ ತಂದೆಸೆಯುವುದು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಳಿ ಹರಿಕೆ ಡಬ್ಬಿಗಳ ಕಳ್ಳತನ ಸೇರಿದಂತೆ ಇತರೇ ಅಪರಾಧ ಚಟುವಟಿಕೆಗಳು ಹೆಚ್ಚಿದ್ದರಿಂದ ಪಂಚಾಯತ್ ವತಿಯಿಂದ ಈ ಹೊಸ ಪ್ರಯತ್ನ ನಡೆಸಲಾಗಿತ್ತು. ಇದರ ಆಧಾರದಲ್ಲಿ ಕೆಲವು ಅಪರಾಧ ಪ್ರಕರಣ ಪತ್ತೆಯೂ ಆಗಿತ್ತು. ತ್ಯಾಜ್ಯ ತಂದು ಹಾಕಿದವರನ್ನು ಗುರುತಿಸಿ ಅವರಿಂದಲೇ ಮತ್ತೆ ಹೆಕ್ಕಿಸಿದ ಪ್ರಸಂಗವೂ ನಡೆದಿತ್ತು.

ಎಲ್‌ಐಸಿ ಯವರು ಹಾಕಿದ್ದ ಲ್ಯಾಂಪ್ ಕಳ್ಳತನವಾಗಿತ್ತು; ಹಲವು ವರ್ಷಗಳ ಹಿಂದೆ ಎಲ್‌ಐಸಿ ವತಿಯಿಂದ ಇದೇ ಈ‌ ಸೀಟು ಭಾಗದಲ್ಲಿ ಬ್ಯಾಟರಿ ಸ್ಟ್ಯಾಂಡ್ ಸಹಿತ ಬೀದಿ ದೀಪ ಅಳವಡಿಸಲಾಗಿದ್ದುದನ್ನು ಬ್ಯಾಟರಿ ಸಹಿತ ಯಾರೋ‌ ಕಳ್ಳರು ಕದ್ದೊಯ್ದಿದ್ದರು. ಇದೀಗ ಭದ್ರತೆಯ ದೃಷ್ಟಿಯಿಂದ ಹಾಕಲಾಗಿದ್ದ ಸಿಸಿ ಕ್ಯಾಮರಾವನ್ನೂ‌ ಕೂಡ ಕಳ್ಳರು ಕದ್ದೊಯ್ದಿದ್ದಾರೆ.

Related posts

ಉಜಿರೆ : ರುಡ್ ಸೆಟ್ ಸಂಸ್ಥೆಯಲ್ಲಿ “ರಬ್ಬರ್‌ ಟ್ಯಾಪಿಂಗ್‌ ʼʼ ತರಬೇತಿಯ ಸಮಾರೋಪ

Suddi Udaya

ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಪತ್ತನಾಜೆ ಗೆಜ್ಜೆ ಸೇವೆ ಸಮಾಪ್ತಿ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಅಂಗಣೋತ್ಸವ , ದೇವರ ದರ್ಶನ ಬಲಿ

Suddi Udaya

ಮಚ್ಚಿನ: ಭಾಗ್ಯಶ್ರೀ ಮಿತ್ರ ಮಂಡಳಿ ನೆತ್ತರ ಮತ್ತು ಊರವರಿಂದ ಶ್ರಮದಾನ

Suddi Udaya

ಕುಮ್ಕಿ ಜಮೀನಿನ ಹಕ್ಕನ್ನು ರೈತರಿಗೆ ನೀಡುವ ಕುರಿತಾಗಿ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಹರೀಶ್ ಪೂಂಜ

Suddi Udaya

ಲೋಕೋಪಯೋಗಿ ಇಲಾಖೆಯಿಂದ ಅಳವಡಿಸಿದ ಬ್ಯಾನರ್‌ನಲ್ಲಿ ಎಡವಟ್ಟು

Suddi Udaya
error: Content is protected !!