
ಮೂಡುಬಿದಿರೆ : ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಒಟ್ಟು 45 ವಿದ್ಯಾರ್ಥಿಗಳು ರಾಜ್ಯದ ಪ್ರಥಮ 10 ರ‍್ಯಾಂಕ್‌ಗಳಲ್ಲಿ ಸ್ಥಾನವನ್ನು ಪಡೆಯುವ ಮೂಲಕ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಸಾರ್ವತ್ರಿಕ ದಾಖಲೆಯನ್ನು ನಿರ್ಮಿಸಿದೆ.
ವಿಜ್ಞಾನ ವಿಭಾಗದಲ್ಲಿ ಸಂಸ್ಥೆಯ ಬಿಂದು ನವಲೆ, ರಾಜ ಯದುವಂಶಿ ಯಾದವ್ ಹಾಗೂ ವಿಜೇತ್ ಜಿ ಗೌಡ 598 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಕ್ಷಯ್ ಎಂ. ಹೆಗ್ಡೆ ಹಾಗೂ ಪ್ರೇಕ್ಷಾ ಎಂ. ಎಸ್. ೫೯೭ ಅಂಕಗಳೊಂದಿಗೆ ತೃತೀಯ ಸ್ಥಾನ, ಪದ್ಮಾವತಿ ಮಲ್ಲೇಶಪ್ಪ ೫೯೬ ಅಂಕಗಳೊಂದಿಗೆ ೪ನೇ ಸ್ಥಾನ, ದರ್ಶನ್ ಶೆಟ್ಟಿ ೫೯೫ ಅಂಕಗಳೊಂದಿಗೆ ೫ನೇ ಸ್ಥಾನ, ವೈಭವ್ ಎಂ, ಚೈತನ್ಯ, ಸ್ಪಂದನ ೫೯೪ ಅಂಕಗಳೊಂದಿಗೆ ೬ನೇ ಸ್ಥಾನ, ವರ್ಷಾ ೫೯೩ ಅಂಕಗಳೊಂದಿಗೆ ೭ನೇ ಸ್ಥಾನ, ನೇತ್ರಾ ಪಾಲ್, ಸೃಷ್ಟಿ, ಚಿನ್ಮಯಿ, ಪ್ರಣಾಮ್ ಶೆಟ್ಟಿ, ಸುಧಾಂಶು, ಸಂಪನ್ ನಾಯಕ್ ೫೯೨ ಅಂಕಗಳೊಂದಿಗೆ ೮ನೇ ಸ್ಥಾನ, ಆವೇಶ್ ಹಸನ್, ವೈಷ್ಣವಿ, ತರುಣ್ ೫೯೧ ಅಂಕಗಳೊಂದಿಗೆ ೯ನೇ ಸ್ಥಾನ, ಅಕ್ಷರ, ಜಶ್‌ವಂತ್, ಮೋಕ್ಷ, ಸಂಪದ ಜೆ. ೫೯೦ ಅಂಕಗಳೊಂದಿಗೆ ೧೦ನೇ ಸ್ಥಾನ ಗಳಿಸುವ ಮೂಲಕ ೨೪ ವಿದ್ಯಾರ್ಥಿಗಳು ರಾಜ್ಯದ ಟಾಪ್ ೧೦ ರ‍್ಯಾಂಕ್ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪ್ರಣಯ್ ಹಾಗೂ ವೈಷ್ಣವಿ ಪ್ರಸಾದ್ ಭಟ್ ೫೯೭ ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನ, ಸನ್ನಿಧಿ, ಶಾರೆಲ್ ಲವಿಟ ರೋಡ್ರಿಗಸ್ ಹಾಗೂ ವಿಸ್ಮಯ ಭಟ್ ೫೯೫ ಅಂಕಗಳನ್ನು ಗಳಿಸುವ ಮೂಲಕ ೫ನೇ ಸ್ಥಾನ, ವೈಷ್ಣವಿ ಶೆಟ್ಟಿ ೫೯೪ ಅಂಕಗಳೊಂದಿಗೆ ೬ನೇ ಸ್ಥಾನ, ಚಿರಂತನ ೫೯೩ ಅಂಕಗಳೊಂದಿಗೆ ೭ನೇ ಸ್ಥಾನ, ಅವನಿ, ನಂದೀಶ್, ಅದಿತಿ,ನಬಿಹಾ ಸಯ್ಯದ್ ೫೯೨ ಅಂಕಗಳೊAದಿಗೆ ೮ನೇ ಸ್ಥಾನ, ಶ್ರವಣ್, ವಚನ್, ಕೃಷ್ಣ ವರ್ಮಾ, ಜತಿನ್, ನಿಯತಿ, ತೃಪ್ತಿ ೫೯೧ ಅಂಕಗಳೊAದಿಗೆ ೯ನೇ ಸ್ಥಾನ, ರೋಹಿತ್ ಪೂಜಾರಿ, ಹರ್ಷವರ್ಧನ ೫೯೦ ಗಳಿಸುವ ೧೦ನೇ ಸ್ಥಾನ ಗಳಿಸುವ ಮೂಲಕ ೧೯ ವಿದ್ಯಾರ್ಥಿಗಳು ಟಾಪ್ ೧೦ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ಪ್ರಕೃತಿ ಎನ್ ೫೯೧ ಅಂಕಗಳನ್ನು ಗಳಿಸಿ ೭ನೇ ಸ್ಥಾನ ಹಾಗೂ ಬನಾವತ್ ಮಯೂಖ ೫೮೯ ಅಂಕಗಳನ್ನು ಪಡೆಯುವ ಮೂಲಕ ೯ನೇ ಸ್ಥಾನ ಗಳಿಸುವ ಮೂಲಕ ೨ ವಿದ್ಯಾರ್ಥಿಗಳು ರಾಜ್ಯದ ಟಾಪ್ ೧೦ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
೫೯೦ಕ್ಕಿಂತಲೂ ಅಧಿಕ ಅಂಕಗಳನ್ನು ೪೪ ವಿದ್ಯಾರ್ಥಿಗಳು, ೫೮೮ಕ್ಕಿಂತಲೂ ಅಧಿಕ ೯೩, ೫೭೦ಕ್ಕಿಂತ ಅಧಿಕ ೪೬೮, ೫೪೦ಕ್ಕಿಂತ ಅಧಿಕ ೧೩೧೭, ೫೧೦ಕ್ಕಿಂತ ಅಧಿಕ ಅಂಕಗಳನ್ನು ೧೯೪೮ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
೫ ವಿಷಯಗಳಲ್ಲಿ ೧೦೦ಕ್ಕೆ ನೂರು ಅಂಕಗಳನ್ನು ೪ ವಿದ್ಯಾರ್ಥಿಗಳು, ೪ ವಿಷಯಗಳಲ್ಲಿ ೦೯, ೩ ವಿಷಯಗಳಲ್ಲಿ ೪೭, ೨ವಿಷಯಗಳಲ್ಲಿ ೧೨೩, ೧ ವಿಷಯದಲ್ಲಿ ೩೪೩ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಕನ್ನಡ ವಿಷಯದಲ್ಲಿ ೧೧೭, ಸಂಸ್ಕೃತದಲ್ಲಿ ೬೫, ರಸಾಯನ ಶಾಸ್ತ್ರದಲ್ಲಿ ೨೬, ಗಣಿತದಲ್ಲಿ ೧೨೪, ಜೀವಶಾಸ್ತ್ರದಲಿ ೧೦೬, ಗಣಕ ವಿಜ್ಞಾನದಲ್ಲಿ ೨೯, ಸಂಖ್ಯಾಶಾಸ್ತ್ರದಲ್ಲಿ ೪೪, ಅರ್ಥಶಾಸ್ತ್ರದಲ್ಲಿ ೨೫, ಬ್ಯುಸಿನೆಸ್ ಸ್ಟಡೀಸ್‌ನಲ್ಲಿ ೩೬, ಅಕೌಂಟೆನ್ಸಿ-೩೬, ಬೇಸಿಕ್ ಮ್ಯಾತ್ಸ್ನಲ್ಲಿ ೨೨ ವಿದ್ಯಾರ್ಥಿಗಳು ೧೦೦ಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಪ್ರೊ. ಎಂ. ಸದಾಕತ್, ಕಾಮರ್ಸ್ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ, ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.