ಗುರುವಾಯನಕೆರೆ: ಇಲ್ಲಿಯ ಎನ್.ಇ.ಟಿ ನರ್ಸಿಂಗ್ ಕಾಲೇಜು (ನೀತಿ ಶಿಕ್ಷಣ ಟ್ರಸ್ಟ್‌ನ ಘಟಕ) ಮೊದಲ ಬ್ಯಾಚ್ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವು ಎ.11ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾದ ಉಜಿರೆ ಎಸ್.ಡಿ.ಎಂ ಹಾಸ್ಪಿಟಲ್ ನ ವ್ಯವಸ್ಥಾಪಕ ನಿರ್ದೇಶಕ ಎಂ ಜನಾರ್ಧನ್ ರವರು ದೀಪ ಪ್ರಜ್ವಲಿಸಿ ಮಾತನಾಡಿದರು. ಉಜಿರೆ ಎಸ್.ಡಿ.ಎಂ ಹಾಸ್ಪಿಟಲ್ ನ ನರ್ಸಿಂಗ್ ಸೂಪರಿಂಡೆಂಟ್ ಶೆರ್ಲಿ ರವರು ಲ್ಯಾಂಪ್ ಲೈಟಿಂಗ್ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

ವೇದಿಕೆಯಲ್ಲಿ ನೀತಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಸಾಜಿ ಪಿ.ಆರ್, ಮ್ಯಾನೇಜಿ0ಗ್ ಟ್ರಸ್ಟಿ ನಿತೀಶ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ. ಮನು ಕೆ.ಜೆ ಜೋಸೆಫ್ ಪ್ರಮಾಣ ವಚನ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಡಾ. ಪ್ರವೀಣ್ ಕುಮಾರ್, ಸೌಮ್ಯ ಹೆಚ್.ಆರ್, ಡಾ. ಶ್ರೀಹರಿ, ಡಾ. ವಿದ್ಯಾ ಗೌರಿ, ಸೋಜು ಅಗಸ್ಟೀನ್ ಹಾಗೂ ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪಿ.ಆರ್.ಒ ಶ್ರೀಮತಿ ಮಧುರಾ ಸ್ವಾಗತಿಸಿದರು.ಉಪನ್ಯಾಸಕರಾದ ಮೇರ್ಲಿ ನಿರೂಪಿಸಿ, ಪೂಜಾ ರವರು ಅತಿಥಿಯಾದ ಶೆರ್ಲಿ ರವರ ಪರಿಚಯವನ್ನು ಬೋಧಿಸಿ, ವಂದಿಸಿದರು.