April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮುಳಿಕ್ಕಾರುನಲ್ಲಿ ದೈವ ವ್ಯಾಘ್ರ ಚಾಮುಂಡಿ, ಪರಿವಾರ ದೈವಗಳ ನೇಮೋತ್ಸವ

ಧರ್ಮಸ್ಥಳ : ಇಲ್ಲಿಯ ಮುಳಿಕ್ಕಾರು ಬೈಲಿನ ಶ್ರೀ ವ್ಯಾಘ್ರ ಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತ್ತು.

ಎ.10 ರಂದು ಬೆಳಿಗ್ಗೆ ಮುಳಿಕ್ಕಾರು ನಿಡ್ಲೆ ಮಧ್ಯೆ ಮಾಡಾಂಗಳ್ ಎಂಬಲ್ಲಿ ಹರಿಯುತ್ತಿರುವ ಸಂಪಿಗೆ ನದಿ ಮದ್ಯದಲ್ಲಿರುವ ಬೆರ್ಮೆರ್ ( ನಾಗ ಬ್ರಹ್ಮ) ಸಾನಿಧ್ಯ ದಲ್ಲಿ ನಾಗ ಬ್ರಹ್ಮದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ನಂತರ ಕಲ್ಲಾಜೆ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಪಿಗೆ ನದಿ ತಟದಲ್ಲಿ ವನ ಭೋಜನ ನಡೆಯಿತು. ರಾತ್ರಿ 9 ಗಂಟೆಗೆ ಕಲ್ಲಾಜೆ ಶ್ರೀ ಪಿಲಿ ಚಾಮುಂಡಿ ದೈವಸ್ಥಾನದಿಂದ ದೈವಗಳ ವೈಭವದ ಭಂಡಾರ ಹೊರಟು ಕಾಡಿನ ಮದ್ಯೆ ಇರುವ ನೆಲ್ಲಿಕಟ್ಟೆ ಎಂಬಲ್ಲಿ ನೇಮೋತ್ಸವ ಜರಗಿತು.

ಈ ಸಂದರ್ಭದಲ್ಲಿ ಗ್ರಾಮದ ಗುತ್ತಿನರಾರಾರು ಸೇರಿದಂತೆ ದೈವಸ್ಥಾನ ಸಮಿತಿ ಸರ್ವ ಸದಸ್ಯರು, ಊರ ಪ್ರಮುಖರು, ಹಾಗೂ ಊರ, ಪರವೂರ ಭಕ್ತ ಭಾಂದವರು ಉಪಸ್ಥಿತರಿದ್ದರು.

Related posts

ಜ.1: ಸಾವ್ಯ-ಗುಜ್ಜೊಟ್ಟು 34ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜ್ಯೋತ್ಸವ

Suddi Udaya

ಗ್ರಾ.ಪಂ. ನೌಕರರ ಜಿಲ್ಲಾ ಮಟ್ಟದ ಕುಂದು ಕೊರತೆ ಅದಾಲತ್ ಸಭೆ ನಡೆಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ

Suddi Udaya

ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ವಾತ್ಸಲ್ಯ ಮನೆ ನಿರ್ಮಾಣದ ಕಾಮಗಾರಿಗೆ ಚಾಲನೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಹಿರಿಯ ಸದಸ್ಯೆ ಲ. ಸುಶೀಲಾ ಎಸ್ ಹೆಗ್ಡೆಯವರಿಂದ ಅರ್ಹ ಕುಟುಂಬಕ್ಕೆ ಆಹಾರ ಸಾಮಾಗ್ರಿ ವಿತರಣೆ

Suddi Udaya

ಪಡಂಗಡಿ ಗ್ರಾ.ಪಂ. ನಲ್ಲಿ ಕ್ರಿಯಾ ಯೋಜನೆ ತಯಾರಿ ಬಗ್ಗೆ ವಿಶೇಷ ಗ್ರಾಮ ಸಭೆ

Suddi Udaya
error: Content is protected !!