April 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ : ಕಾಲುಗಳನ್ನು ಕತ್ತರಿಸಿದ ರೀತಿಯಲ್ಲಿ ಚಿರತೆ ಮೃತದೇಹ ಪತ್ತೆ: ಸ್ಥಳಕ್ಕೆ ಹಿರಿಯ ಅಧಿಕಾರಿಗಳ ದೌಡು ಪರಿಶೀಲನೆ

ಬೆಳ್ತಂಗಡಿ: ಕಾಲುಗಳನ್ನು ಕತ್ತರಿಸಿದ ಕೊಳೆತ ರೀತಿಯಲ್ಲಿ ಚಿರತೆಯೊಂದು ಸವಣಾಲು ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಕಾರ್ಕಳ ಮತ್ತು ಬೆಳ್ತಂಗಡಿ ವನ್ಯಜೀವಿ ಇಲಾಖೆ ಅಧಿಕಾರಿಗಳು ತಂಡ ದೌಡಿಯಿಸಿ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಮೀಸಲು ಅರಣ್ಯ ಪ್ರದೇಶ ಇತ್ತಿಲಪೇಲ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆಯ ಮೃತ ದೇಹ ನಾಲ್ಕು ಕಾಲುಗಳನ್ನು ತುಂಡರಿಸಿದ ರೀತಿಯಲ್ಲಿ ಪತ್ತೆಯಾಗಿದ್ದು.ಏ.11 ರಂದು ಸಂಜೆ ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್.ಎಫ್.ಓ ಶರ್ಮಿತಾ ಅವರಿಗೆ ಮಾಹಿತಿ ಬಂದಿದ್ದು. ಏ.12 ರಂದು ಬೆಳಗ್ಗೆ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದು. ಕಾರ್ಕಳ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳು ಕೂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಮೃತದೇಹವನ್ನು ವೈದ್ಯರು ಶವಪರೀಕ್ಷೆ ಮಾಡಿ ಅಲ್ಲಿಯೇ ದಫನ ಮಾಡಲಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ವನ್ಯಜೀವಿ ವಿಭಾಗದಲ್ಲಿ ಪ್ರಕರಣ ದಾಖಲಾಗಲಿದೆ‌.

ಯಾರೋ ದುಷ್ಕರ್ಮಿಗಳು ಚಿರತೆಯ ತಲೆಗೆ ಗುಂಡು ಹಾರಿಸಿ ಸಾಯಿಸಿ ಕಾಲಿನ ಉಗುರುಗಳಿಗಾಗಿ ಕಾಲನ್ನು ತುಂಡರಿಸಿಕೊಂಡು  ಹೋಗಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ.

ಹಲವಾರು ಸಮಯಗಳಿಂದ ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿರುವ ಮಾಹಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಇದ್ದರೂ ಸುಮ್ಮನಿದ್ದಾರೆ ಎಂಬುವುದು ಸ್ಥಳೀಯರ ಆರೋಪವಾಗಿದೆ. ಈ ಬಗ್ಗೆ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಹತ್ಯಡ್ಕ: ನಿವೃತ್ತಿಗೊಂಡ ಕೆ.ವಿ.ಜಿ ಬ್ಯಾಂಕ್ ಮ್ಯಾನೇಜರ್ ಪುಷ್ಪರಾಜ್ ಕೆ.ಸಿ ರವರಿಗೆ ಬಿಳ್ಕೋಡುಗೆ ಸಮಾರಂಭ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

Suddi Udaya

ಬಳಂಜ ಪಂಚಶ್ರೀ ಮಹಿಳಾ ಭಜನಾ ಮಂಡಳಿಯಿಂದ ಓಡಿಲ್ನಾಳ ಕ್ಷೇತ್ರದಲ್ಲಿ ಭಜನಾ ಸೇವೆ

Suddi Udaya

ಅಳದಂಗಡಿ ಶ್ರೀ ಸತ್ಯ ದೇವತೆ ಕಲ್ಲುರ್ಟಿ ದೇವಸ್ಥಾನಕ್ಕೆ ನಟ ವಿಜಯರಾಘವೇಂದ್ರ ಭೇಟಿ

Suddi Udaya

ಇಂದಬೆಟ್ಟು ನಿವಾಸಿ ಬೌತೀಸ್ ಪಿಂಟೊ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕುವೆಟ್ಟು: ಶಕ್ತಿನಗರದ ಬಳಿ ಪಾದಾಚಾರಿಗೆ ಬೈಕ್ ಡಿಕ್ಕಿ

Suddi Udaya
error: Content is protected !!