37.3 C
ಪುತ್ತೂರು, ಬೆಳ್ತಂಗಡಿ
April 18, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾರಾವಿ: ಮರಕ್ಕೆ ಡಿಕ್ಕಿ ಹೊಡೆದ ಬೈಕ್ – ಇಬ್ಬರು ಸ್ಥಳದಲ್ಲಿಯೇ ಸಾವು

ನಾರಾವಿ: ಕುತ್ಲೂರು ಗ್ರಾಮದ ಪುರುಷರ ಗುಡ್ಡೆ ಬಳಿ ಕೊಕ್ರಾಡಿ-ನಾರಾವಿ ಸಾರ್ವಜನಿಕ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಧ್ಯರಾತ್ರಿ ಎ.12 ರಂದು ನಡೆದಿದೆ.

ಸುಮಾರು ರಾತ್ರಿ 12.15 ಕ್ಕೆ ಗಂಟೆಗೆ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಪುರುಷ ಗುಡ್ಡೆ ಎಂಬಲ್ಲಿ ಕೊಕ್ರಾಡಿ -ನಾರಾವಿ ಸಾರ್ವಜನಿಕ ಡಾಮರು ರಸ್ತೆಯಲ್ಲಿ  ಕೆ ಎ 19 ಇಪಿ 9677 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ಪ್ರಶಾಂತ ರವರು ತಿರುವು ರಸ್ತೆಯಲ್ಲಿ ನಾರಾವಿ ಕಡೆಯಿಂದ ವೇಣೂರು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲ ಬದಿಗೆ ಸವಾರಿ ಮಾಡಿಕೊಂಡು ಬಂದು ರಸ್ತೆಯ ಬಲ ಬದಿಯಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಪ್ರಶಾಂತ್ ಮತ್ತು ಸಹ ಸವಾರ ದಿನೇಶ ರವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮೇ 20: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ: ಅಳದಂಗಡಿಯಲ್ಲಿ ರೋಡ್ ಶೋ, ವಿಜಯೋತ್ಸವ- ಸಂದೀಪ್ ನೀರಲ್ಕೆ

Suddi Udaya

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವೀನ್ ಮತ್ತು ಹರಿಣಾಕ್ಷಿ ನವ ದಂಪತಿಗಳಿಂದ ನಂದಗೋಕುಲ ಗೋಶಾಲೆಗೆ ರೂ 1.47 ಲಕ್ಷ ಗೋ ನಿಧಿ ಹಸ್ತಾಂತರ

Suddi Udaya

ಬೆಳ್ತಂಗಡಿ ಆಡಳಿತ ಸೌಧದಲ್ಲಿ ಕಾಯಕ ಶರಣರ ಜಯಂತಿ ಆಚರಣೆ

Suddi Udaya

ತಣ್ಣೀರುಪಂತ, ಬಾರ್ಯ, ತೆಕ್ಕಾರು ಜನಪ್ರತಿನಿಧಿಗಳು ಮತ್ತು ಪಕ್ಷದ ಪದಾಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ: ಶಾಸಕ ಹರೀಶ್ ಪೂಂಜರಿಂದ ಕಾರ್ಯಕರ್ತರಿಗೆ ಅಭಿನಂದನೆ

Suddi Udaya

ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ ವತಿಯಿಂದ ವಿಶೇಷ ತರಬೇತಿ ದಿನಾಚರಣೆ

Suddi Udaya

ರೆಖ್ಯ: ಕಾಂಗ್ರೆಸ್ ಮುಖಂಡ ಸುನಿಲ್ ಕೋಟಿಮಾರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Suddi Udaya
error: Content is protected !!