ಬೆಳ್ತಂಗಡಿ: ಟೀಮ್ ನವಭಾರತ್ ಬೆಳ್ತಂಗಡಿ ಆಶ್ರಯದಲ್ಲಿ ಬೆಳ್ತಂಗಡಿ ವಾಲಿಬಾಲ್ ಅಸೋಸಿಯೇಷನ್ ಸಹ ಭಾಗಿತ್ವದಲ್ಲಿ ದಿ. ತುಷಾರ್ ಕೆ ಸ್ಪರಣಾರ್ಥ ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಎ. 12ರಂದು ವಾಣಿ ಪದವಿ ಪೂರ್ವ ಕ್ರೀಡಾಂಗಣದಲ್ಲಿ ಜರಗಿತು.

ಪ್ರಥಮ ರೂ.14000 ನಗದು ಮತ್ತು ಟ್ರೋಪಿಯನ್ನು ಸಿ.ಎಂ.ಎ. ಗೇರುಕಟ್ಟೆ ತಂಡ, ದ್ವಿತೀಯ ರೂ.10000 ನಗದು ಮತ್ತು ಟ್ರೋಪಿಯನ್ನು ಆರ್.ಜೆ ಫ್ರೆಂಡ್ಸ್ ಪಡೆದುಕೊಂಡಿತು. ಇತರ ತಂಡಗಳು ತೃತೀಯ ರೂ.7000 ನಗದು ಮತ್ತು ಟ್ರೋಪಿ, ಚತುರ್ಥ ರೂ.4000 ನಗದು ಮತ್ತು ಟ್ರೋಫಿಯನ್ನು ಪಡೆದುಕೊಂಡಿವು.
ಸಮಾರೋಪ ಸಮಾರಂಭದಲ್ಲಿ ಟ್ರೋಪಿಯನ್ನು ಮುಖ್ಯ ಅತಿಥಿಗಳಾದ ಸುದ್ದಿ ಉದಯದ ವಾರಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ತುಕಾರಾಮ್ ವಿತರಿಸಿದರು. ಈ ಸಂದರ್ಭದಲ್ಲಿ ಟೀಮ್ ನವ ಭಾರತ್ ಬೆಳ್ತಂಗಡಿಯ ಸುವಿತ್, ಸನಾಲ್, ವಿನ್ಯಾಸ್, ಸುಮಂತ್, ಪ್ರಜ್ವಲ್ ಮೋಕ್ಷಿತ್, ಹರೀಶ್ ಗೌಡ ಉಪಸ್ಥಿತರಿದ್ದರು.