September 6, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯುವ ಉಚಿತ ತರಬೇತಿಗಳಿಗೆ ಅರ್ಜಿ ಆಹ್ವಾನ

ಉಜಿರೆ: ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಕೃತಕ ಆಭರಣಗಳ ತಯಾರಿಕೆ ಡಿ.18 ರಿಂದ ಡಿ.30 ರವರೆಗೆ (13 ದಿನಗಳು), ಮೋಟಾರ್ ರಿವೈಂಡಿಂಗ್ ಜ.4 ರಿಂದ ಫೆ.2ರವರೆಗೆ (30 ದಿನಗಳು), ಜೇನು ಸಾಕಾಣಿಕೆ ಜ.8 ರಿಂದ ಜ.17 ರವರೆಗೆ (10 ದಿನಗಳು), ಎಸಿ ಮತ್ತು ಫ್ರಿಡ್ಜ್ ರಿಪೇರಿ ಜ.19 ರಿಂದ ಫೆ.17ರವರೆಗೆ (30 ದಿನಗಳು), ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಫೆ.5 ರಿಂದ ಫೆ.17 ರವರೆಗೆ (13 ದಿನಗಳು)  ತರಬೇತಿಗಳು ನಡೆಯಲಿದೆ.


ಜೊತೆಗೆ ಮುಂದಿನ ದಿನಗಳಲ್ಲಿ ಕೃಷಿ ಉದ್ಯಮಿ, ಮೊಬೈಲ್ ಫೋನ್ ರಿಪೇರಿ, ಮೆನ್ಸ್ ಪಾರ್ಲರ್, ಮೋದಲಾದ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಎಲ್ಲಾ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ರುಡ್ ಸೆಟ್ ಸಂಸ್ಥೆಯ email - [email protected] ಗೆ ಸಲ್ಲಿಸಬಹುದು, ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸುವವರು ಮೊಬೈಲ್ ನಂ. 9364561982 ಗೆ ಸಲ್ಲಿಸಬಹುದು. ನೇರವಾಗಿ ಕೂಡ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಬರೆದು  ನಿರ್ದೇಶಕರು ರುಡ್‌ಸೆಟ್ ಸಂಸ್ಥೆ, ಸಿದ್ದವನ ಉಜಿರೆ 574240, ಇವರಿಗೆ ಕಳೂಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404, ಅಥವಾ 9591044014, 9902594791 ಗೆ ಸಂಪರ್ಕಿಸಬಹುದು. ಜೊತೆಗೆ https://forms.gle/Z2xPLE1FigamcMBd9 ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ. 

Related posts

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ: ಮಹಿಳಾ ಕಾಂಗ್ರೆಸ್‌ನಿಂದ ದೂರು

Suddi Udaya

ಎಸ್‌ಡಿಎಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವೇಕ ಜಾಗೃತಿ ಉಪನ್ಯಾಸ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಪೃಥ್ವಿ ಜುವೆಲ್ಸ್ ವತಿಯಿಂದ ಭಾರತೀಯ ಸೇನೆಗೆ ನೇಮಕಗೊಂಡಿರುವ ಮನೋಹರ್ ಪೂಜಾರಿಯವರಿಗೆ ಗೌರವಾರ್ಪಣೆ

Suddi Udaya

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆ, ಹಿರಿಯ ನಾಗರಿಕರಿಗೆ ಸನ್ಮಾನ

Suddi Udaya

ಓಡಿಲ್ನಾಳ ಸ. ಉ. ಪ್ರಾ. ಶಾಲೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ, ಪೋಷಕರ ಸಭೆ

Suddi Udaya

ಜು.5 ರಿಂದ ಬೆಳ್ತಂಗಡಿ ಆನ್ ಸಿಲ್ಕ್ಸ್ ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್: ಪ್ರತಿ ಖರೀದಿಗೆ ಶೇ. 50 ರಷ್ಟು ರಿಯಾಯಿತಿ

Suddi Udaya
error: Content is protected !!