25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಅಳದಂಗಡಿಯಲ್ಲಿ ಭಕ್ತಿ ಭಾವದಿಂದ ಮೊಳಗಿದ ಹನುಮೋತ್ಸವ, ಸಾವಿರಾರು ಭಕ್ತರು ಭಾಗಿ ಕುಣಿತ ಭಜನೆ, ಹನುಮ ಯಾಗ, ಹನುಮಾನ್ ಚಾಲಿಸ ಪಠಣ, ಹನುಮ ಶ್ರೀರಕ್ಷೆ ವಿತರಣೆ, ಲಂಕಾದಹನ, ಶಿವಾಜಿ‌ ನಾಟಕ

ಅಳದಂಗಡಿ: ಸಂಸ್ಕಾರ ಭಾರತಿ ಬೆಳ್ತಂಗಡಿ ಮತ್ತು ಹನುಮೋತ್ಸವ ಸಮಿತಿ ಅಳದಂಗಡಿ ಇದರ ವತಿಯಿಂದ ಹನುಮೋತ್ಸವ ಕಾರ್ಯಕ್ರಮವು ಅಳದಂಗಡಿ ಸತ್ಯದೇವತಾ ದೈವಸ್ಥಾನದ ಮೈದಾನದಲ್ಲಿ ಎ‌ 12 ರಂದು ನಡೆಯಿತು.

ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು ಮಹಾಭಿವಂದ್ಯ ಗೌರಾಭಿವಂದನೆ ಸ್ವೀಕರಿಸಿ ತ್ಯಾಗದ ತುತ್ತ ತುದಿಯಲ್ಲಿ ಶ್ರದ್ದಾ ಭಕ್ತಿಯ ಸೇವೆ ಮಾಡಿದಾಗ ಭಗವಂತನನ್ನು ಕಾಣಲು ಸಾಧ್ಯವಿದೆ ಎಂದು ಆಶೀರ್ವಾದ ನೀಡಿದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಅಯೋಧ್ಯೆಯಲ್ಲಿ ರಾಮೋತ್ಸವ ನಡೆದ ಬೆನ್ನಲ್ಲೇ ಇಲ್ಲಿ ರಾಮನ ಭಕ್ತ ಹನುಮಂತನ ಹನುಮೋತ್ಸವ ನಡೆದಿದೆ.ಸನಾತನ ಹಿಂದೂ ಧರ್ಮದ ಶಕ್ತಿಯನ್ನು ಹೆಚ್ಚಿಸುತ್ತಿರುವ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು ಒರ್ವ ಅದ್ಬುತ ಸನ್ಯಾಸಿ, ಅವರಿಗೆ ಗೌರವದ ಸ್ಥಾನ ಸಿಕ್ಕಿದೆ.ಇದು ನಮಗೆಲ್ಲ ಹೆಮ್ಮೆಯ ವಿಚಾರ ಎಂದರು.ಶಾಸಕ ಹರೀಶ್ ಪೂಂಜ ಮಾತನಾಡಿ ಹಿಂದೂ ಹಿಂದುತ್ವ ಉಳಿಯುವಲ್ಲಿ ಧಾರ್ಮಿಕ ಆಚರಣೆಯ ಪರಂಪರೆಯಿಂದ ಸಾಧ್ಯವಾಗಿದೆ. ಹನುಮೋತ್ಸವ ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಕಾರ್ಯಕ್ರಮ‌ ಎಂದರು.

ವೇದಿಕೆಯಲ್ಲಿ ಬಳ್ಳಮಂಜ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹರ್ಷ ಸಂಪಿಗೆತ್ತಾಯ, ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಯುವ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರ್,ಪ್ರಸಿದ್ದ ವೈದ್ಯರಾದ ಡಾ. ಎನ್.ಎಮ್ ತುಳಪುಳೆ, ಶಶಿಧರ ಡೋಂಗ್ರೆ, ಉದ್ಯಮಿ ಯೋಗೀಶ್ ಕುಮಾರ್ ಕಡ್ತಿಲ ಉಪಸ್ಥಿತರಿದ್ದರು.

ಹನುಮೋತ್ಸವ ಸಮಿತಿ ಅಧ್ಯಕ್ಷ ಸಂಪತ್ ಬಿ ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ವಂದಿಸಿದರು.

Related posts

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಅಳದಂಗಡಿ ಮಹಾಶಕ್ತಿಕೇಂದ್ರದ ಸಭೆ

Suddi Udaya

ಉರುವಾಲುನಲ್ಲಿ ಗುಡ್ಡ ಕುಸಿತ : ಮನೆ ಹಾಗೂ ಕೃಷಿಗೆ ಹಾನಿ

Suddi Udaya

ಗ್ರಾಮಕರಣಿಕ ಮಹೇಶ್ ಗೆ ಜೈಲು ಶಿಕ್ಷೆ

Suddi Udaya

ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಕೆ ಎನ್ ಆಯ್ಕೆ

Suddi Udaya

ಉಜಿರೆ ಬೆನಕ ಹೆಲ್ತ್ ಸೆಂಟರ್ ನ ಡಾ. ಗೋಪಾಲಕೃಷ್ಣ ಕೆ ಅವರಿಗೆ “ಆಯುಷ್ ಶ್ರೀ” ಪ್ರಶಸ್ತಿ

Suddi Udaya

ಸೆ.12-13: ಸೌಜನ್ಯ ಅತ್ಯಾಚಾರ ಪ್ರಕರಣ ಆರೋಪಿಗಳ ಪತ್ತೆಗೆ ಆಗ್ರಹಿಸಿ ಒಕ್ಕಲಿಗರ ಹೋರಾಟ ಸಮಿತಿಯಿಂದ ಮಂಗಳೂರಿನಲ್ಲಿ ಧರಣಿ

Suddi Udaya
error: Content is protected !!