23 C
ಪುತ್ತೂರು, ಬೆಳ್ತಂಗಡಿ
April 17, 2025
Uncategorized

ಬೆಳ್ತಂಗಡಿ ಧರ್ಮ ಪ್ರಾಂತ್ಯದಲ್ಲಿ ಗರಿಗಳ ಹಬ್ಬ

ಬೆಳ್ತಂಗಡಿ: ಇಲ್ಲಿಯ ಧರ್ಮ ಪ್ರಾಂತ್ಯದಲ್ಲಿ ಗರಿಗಳ ಹಬ್ಬ ಆಚರಿಸಲಾಯಿತು. ಪ್ರಭು ಕ್ರಿಸ್ತನ ಜೆರುಸೆಲಂ ಪ್ರವೇಶನದ ನೆನಪಿನಲ್ಲಿ ಆಚರಿಸುವ ಈ ಹಬ್ಬವು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷ ಬಿಷಪ್ ಲಾರೆನ್ಸ್ ನವರ ಕಾರ್ಮಿಕತ್ವದಲ್ಲಿ ಸಂತ ಲಾರೆನ್ ಸರ ಪ್ರಧಾನ ದೇವಾಲಯದಲ್ಲಿ ಆಚರಿಸಲಾಯಿತು.

ಈ ಹಬ್ಬವು ಪ್ರಭು ಕ್ರಿಸ್ತರ ಶಿಲುಬೆಯ ಮರಣದ ಹಾಗೂ ಪುನರುದ್ದಾನದ ಸ್ಮರಣೆಯನ್ನು ಆಚರಿಸುವ ಪವಿತ್ರ ವಾರದ ಮೊದಲನೆಯ ದಿನ. ಇದು ಕ್ರೈಸ್ತರಿಗೆ ಸಂಬಂಧಿಸಿದಂತೆ ಉಪವಾಸದ ಹಾಗೂ ಪ್ರಾರ್ಥನೆಯ ದಿನಗಳು. ಸಹೋದರರಿಗಾಗಿ ಪ್ರಾಣ ತ್ಯಾಗ ಮಾಡಿದ ಪ್ರಭು ಕ್ರಿಸ್ತರು ನಮಗೆ ಪ್ರೇರಣೆಯಾಗಲಿ ಎಂದು ಪರಮ ಪೂಜ್ಯ ಲಾರೆನ್ಸ್ ನವರು ಹಾರೈಸಿದರು. ಈ ಗರಿಗಳ ಹಬ್ಬವು ಧರ್ಮ ಪ್ರಾಂತ್ಯದ ಎಲ್ಲಾ ದೇವಾಲಯಗಳಲ್ಲಿ ಇಂದು ಆಚರಿಸಲಾಯಿತು.

ಸಂತ ಲಾರೆನ್ ಸರ ದಾನ ದೇವಾಲಯದ ಧರ್ಮ ಗುರುಗಳಾಗಿರುವ ಫಾದರ್ ಥಾಮಸ್, ವಂದನೀಯ ಫಾಧರ್ ಕುರಿಯಾಕೋಸ್, ವಂಧನೀಯ ಫಾದರ್ ಟೊಮಿ, ಧರ್ಮ ಭಗಿನಿಯರು ಹಾಗು ಬಹು ಸಂಖ್ಯೆಯಲ್ಲಿ ವಿಶ್ವಾಸಿಗಳು ಭಾಗವಹಿಸಿದರು.

Related posts

ಸ್ವಚ್ಛತಾ ಕೀ ಸೇವಾ ಆಂದೋಲನ

Suddi Udaya

ನಾಳೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ನಡ ಗ್ರಾ.ಪಂ. ನ ಅಧ್ಯಕ್ಷರಾಗಿ ಮಂಜುಳಾ, ಉಪಾಧ್ಯಕ್ಷರಾಗಿ ದಿವಾಕರ ಪೂಜಾರಿ ಆಯ್ಕೆ

Suddi Udaya

ಲಾಯಿಲ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಕ್ಕಿಂಜೆ: ಕಾರೊಂದರ ಮೇಲೆ ಕಾಡಾನೆ ದಾಳಿ

Suddi Udaya
error: Content is protected !!