ಉಜಿರೆ: ಅಂಬೇಡ್ಕರ್ ಮನೋಭಾವ ಅರಿವಾಗಲು ಅವರ ಬಗ್ಗೆ ಓದಿದರೆ ಸಾಲದು, ನಾವು ಅಂಬೇಡ್ಕರ್ ಆಗಬೇಕು. ಮತದಾನದ ದುರ್ಬಳಕೆ ಆದರೆ ಸಂವಿಧಾನಕ್ಕೆ ಯಾವುದೇ ಅರ್ಥವಿರುವುದಿಲ್ಲ, ಬಲಾಢ್ಯರ ಆಳ್ವಿಕೆ ಮರುಕಳಿಸಿ ಸಂವಿಧಾನದ ಆಶಯ ನಾಶವಾಗಬಹುದು ಎಂದು ಅಂಬೇಡ್ಕರ್ ರವರು ಹೇಳಿದ್ದಾರೆ. ಹಾಗೆಯೇ ಮಹಿಳೆಯರ ಸಬಲೀಕರಣಕ್ಕೆ ಸಂವಿಧಾನದಲ್ಲಿ ಮಹತ್ವ ಕೊಡಲಾಗಿದೆ. ಶಿಕ್ಷಣದಿಂದ ಮಾತ್ರ ಅಸ್ಪ್ರಶ್ಯತೆ ಹೋಗಲಾಡಿಸಲು ಸಾಧ್ಯ ಎಂದು ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ್ ಹಳೆಮನೆ ಹೇಳಿದರು.

ಅಂಬೇಡ್ಕರ್‌ರವರು ನಾನು ಮುಕ್ತ ಮನಸ್ಸಿನವನು ಶೂನ್ಯ ಮನಸ್ಸಿನವನಲ್ಲ ಎಂದು ಹೇಳಿದ್ದಾರೆ. ಶೋಷಿತ ಜನಾಂಗಕ್ಕೆ ಸಮಾನತೆ, ವಿದ್ಯೆ ಕಲ್ಪಿಸಿದ ಡಾ. ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನದಲ್ಲಿ ಪ್ರತಿಯೊಂದು ಸಮುದಾಯವನ್ನು ತಲುಪಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಸಲ್ಡಾನ ಹೇಳಿದರು. ಇನ್ನೋರ್ವ ಅತಿಥಿಯಾಗಿ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಗೋಳಿತೊಟ್ಟು ಇಲ್ಲಿನ ಪದವೀಧರ ಶಿಕ್ಷಕ ಅಬ್ದುಲ್ ಲತೀಫ್ ಸಿ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಥೆ, ಕಾದಂಬರಿಗಾರ ಡಾ. ರಾಜಶೇಖರ್‌ರವರ “ದೇವರ ತುಪ್ಪ” ಎಂಬ ಕಥೆಗೆ ಸಮಾಜಮುಖಿ ವಾರ್ಷಿಕ ಕಥಾ ಪುರಸ್ಕಾರ 2024 ರ ಬಹುಮಾನ ಸಂದ ಪ್ರಯುಕ್ತ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಂಘದ ನಾಯಕ ದೀಕ್ಷಿತ್ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಪ್ರಶಿಕ್ಷಣಾರ್ಥಿಗಳಿಗೆ “ಶಿಕ್ಷಣ ಕ್ಷೇತ್ರಕ್ಕೆ ಡಾ ಬಿ. ಆರ್. ಅಂಬೇಡ್ಕರ್‌ರವರ ಕೊಡುಗೆ ” ಎಂಬ ವಿಷಯದ ಬಗ್ಗೆ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಬಿ.ಇಡಿ. ಪ್ರಶಿಕ್ಷಣಾರ್ಥಿ ಆದಿತ್ಯ ಬಿ.ಆರ್. ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ವಿದ್ಯಾಶ್ರೀ ಪಿ, ತಿರುಮಲೇಶ್ ರಾವ್ ಎನ್ ಕೆ, ಮಂಜು ಆರ್, ಪ್ರಿಯದರ್ಶಿನಿ ಜಿ ಭಟ್, ಆಧ್ಯಾ ಯು ಹಾಗೂ ಪ್ರಥಮ ಮತ್ತು ದ್ವಿತೀಯ ಬಿ.ಎಡ್. ಹಾಗೂ ಡಿ.ಎಡ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಥಮ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಾದ ಸುದೀಪ್ ಮಹಾಂತೇಶ್ ಚೌಹಾನ್ ಸ್ವಾಗತಿಸಿ, ಚೈತ್ರ ಅತಿಥಿ ಪರಿಚಯಿಸಿ, ವರ್ಷ ಪಿ ಆರ್ ವಂದಿಸಿ, ಸಾಯಿಧೃತಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.