ಬೆಳ್ತಂಗಡಿ : ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯ ಮುಂಡಾಜೆ-ಧರ್ಮಸ್ಥಳ ರಸ್ತೆಯ ಕೊಂಬಿನಡ್ಕ ಶಾಲೆ ಸಮೀಪದ ಕೆದಿಹಿತ್ತುವಿನಲ್ಲಿ ಎರಡು ಕಾರುಗಳು ಮುಖಾಮುಖಿ ಢಿಕ್ಕಿ ಹೊಡೆದ ಘಟನೆ ಏ.13ರಂದು ನಡೆದಿದೆ.
ಈ ರಸ್ತೆಯಲ್ಲಿ ಸುಮಾರು 6 ಕಡೆ ಅಗಲ ಕಿರಿದಾದ ಕಿರು ಸೇತುವೆಗಳಿದ್ದು, ಆಗಾಗ ಹೆಚ್ಚಿನ ಅಪಘಾತಗಳಿಗೆ ಕಾರಣವಾಗುತ್ತಿದೆ. ಘಟನೆಯಲ್ಲಿ ಎರಡೂ ಕಾರುಗಳಲ್ಲಿ ಇದ್ದವರು ಅಪಾಯದಿಂದ ಪಾರಾಗಿದ್ದಾರೆ.