ನಾವೂರು: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ನಾವೂರು ಗ್ರಾಮ ಸಮಿತಿಯ ಸಭೆಯು ತಾಲೂಕು ಗೌಡರ ಯುವ ವೇದಿಕೆಯ ಸದಸ್ಯ ಪ್ರದೀಪ್ ಗೌಡ ನಾಗಾಜೆ ರವರ ಮನೆಯಲ್ಲಿ ಎ.12 ರಂದು ನಡೆಯಿತು.
ಸಭೆಯಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಜೊತೆ ಕಾರ್ಯದರ್ಶಿ ಕೆ.ಎಂ ಶ್ರೀನಾಥ್ ರವರು ಮಾತನಾಡಿ 70 ಮನೆಗಳಿಗೆ ಪ್ರತಿಯೊಂದು ಮನೆಗೆ ಹೋಗಿ ಆಮಂತ್ರಣ ಪತ್ರಿಕೆಯನ್ನು ನೀಡುವುದು ಮತ್ತು ಕಾರ್ಯಕ್ರಮದ ಬಗ್ಗೆ ಹಾಗೂ ಪುಂಡಿ ಪಣವು ಈ ವಿಚಾರವಾಗಿ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪೂವಪ್ಪ ಗೌಡ, ಗಣೇಶ್ ಗೌಡ ನಾವೂರು, ಕಾರ್ಯದರ್ಶಿ ದಿನೇಶ್, ಸಂಘದ ಸದಸ್ಯರು ಉಪಸ್ಥಿತರಿದ್ದರು.