
ನಾಲ್ಕೂರು: ಜೋಗಿ ಪುರುಷ ಭಕ್ತ ವೃಂದ ನಿಟ್ಟಡ್ಕ-ನಾಲ್ಕೂರು ಇದರ ವತಿಯಿಂದ ರಾಶಿ ಪೂಜೆಯು ನಿಟ್ಟಡ್ಕ ಪಲ್ಕೆಯಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಸುರೇಶ್ ಪೂಜಾರಿ ಜೈಮಾತ ನಾಲ್ಕೂರು ಇವರ ನೇತೃತ್ವದಲ್ಲಿ ಪುರುಷರ ರಾಶಿ ಪೂಜೆಯಲ್ಲಿ ಊರ ಪರವೂರ ನೂರಾರು ಭಕ್ತರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.

ಕಳೆದ ಐದು ದಶಕಗಳಿಂದ ಜನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮವಹಿಸಿ, ನಿರಂತರ ಪುರಷ ಕಟ್ಟುವುದರಲ್ಲಿ ತೊಡಗಿಸಿಕೊಂಡಿರುವ ಹಿರಿಯರಾದ ಚೆನಮು ಪೂಜಾರಿ ಸಾಂತ್ಯಾಲು,ಕೃಷ್ಣಪ್ಪ ಪೂಜಾರಿ ಶಾಂತಿಗುರಿ,ಪದ್ಮಪ್ಪ ಪೂಜಾರಿ ತಾರಿಪಡ್ಪು,ಹಾಗೂ ದಿ.ಬೋಜ ಶೆಟ್ಟಿ ಅವರ ಪರವಾಗಿ ಸನತ್ ಶೆಟ್ಟಿ ಇವರನ್ನು ಜೋಗಿ ಪುರುಷ ಭಕ್ತ ವೃಂದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಸುಗ್ಗಿಯ ಹುಣ್ಣಿಮೆಯ ಸಂದರ್ಭದಲ್ಲಿ ಮೂರು ದಿನ ಪುರಷರಿಗೆ ಅನ್ನದಾನ ಸೇವೆ ನೀಡಿದ ಸುಧೀರ್ ಸಾಲಿಯಾನ್ ಮಜಲೋಡಿ, ರಾಮಣ್ಣ ಪೂಜಾರಿ ಖಂಡಿಗ,ವಿಜಯ ಪೂಜಾರಿ ಯೈಕುರಿ ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಳಂಜ ಗ್ರಾಪಂ ಅಧ್ಯಕ್ಷೆ ಶೋಭಾ ಕುಲಾಲ್, ಜೋಗಿ ಪುರುಷ ಭಕ್ತ ವೃಂದದ ಮುಖ್ಯಸ್ಥ ಸುರೇಶ್ ಪೂಜಾರಿ ಜೈಮಾತ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ,ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್, ಬಳಂಜ ಗ್ರಾ.ಪಂ.ಸದಸ್ಯ ಬಾಲಕೃಷ್ಣ ಪೂಜಾರಿ,ಪ್ರಗತಿಪರ ಕೃಷಿಕ ದಿನೇಶ್ ಕೋಟ್ಯಾನ್,ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಸಂಚಾಲಕ ಹರೀಶ್ ವೈ,ಯಕ್ಷ ಸಮಿತಿ ಮುಖ್ಯಸ್ಥರಾದ ಸಂಜೀವ ಶೆಟ್ಟಿ, ಪ್ರಮುಖರಾದ ವಸಂತ ಪೂಜಾರಿ ತಾರಿಪಡ್ಪು, ಶ್ರೀಧರ ಪೂಜಾರಿ ಬಾಕ್ಯರಡ್ಡ, ಶೇಖರ ಪೂಜಾರಿ ಯೈಕುರಿ, ರಮೇಶ್ ಪೂಜಾರಿ ಹೊಸಮನೆ, ರಮಾನಂದ ಪೂಜಾರಿ,ಹೊನ್ನಪ್ಪ ಪೂಜಾರಿ ತಾರಿಪಡ್ಪು, ದುಗ್ಗಯ್ಯ ಪೂಜಾರಿ ಹಂಬೆಜೆ,ಡೀಕಯ್ಯ ಪೂಜಾರಿ ಮಜ್ಜೇನಿ, ವಸಂತ ಪೂಜಾರಿ ನೀರೋಳ್ಬೆ, ಕರುಣಾಕರ ಹೆಗ್ಡೆ ಬೊಕ್ಕಸ, ದೀಪಕ್ ಹೆಚ್.ಡಿ,ಯೋಗೀಶ್ ಪೂಜಾರಿ, ವಿಜಯ ಪೂಜಾರಿ ಯೈಕುರಿ, ಸೀತರಾಮ ಪೂಜಾರಿ ಮಜಲೋಡಿ, ನಾಗೇಶ್ ಶೆಟ್ಟಿ ಕಂರ್ಬಿತ್ತಿಲ್, ನಾರಾಯಣ ಪೂಜಾರಿ, ಜನಾರ್ಧನ ಪೂಜಾರಿ ದರ್ಖಾಸ್, ಸಂಪತ್ ಕೋಟ್ಯಾನ್, ರಂಜಿತ್ ಮಜಲಡ್ಡ,ಶರತ್ ಅಂಚನ್ ಬಾಕ್ಯರಡ್ಡ, ಸಂತೋಷ್ ಹಿಮರಡ್ಡ,ಕೇಶವ ಪೂಜಾರಿ,ಪ್ರಶಾಂತ್ ಮಜಲೋಡಿ, ಪ್ರವೀಣ್ ದರ್ಖಾಸು,ಪ್ರಶಾಂತ್ ದರ್ಖಾಸು, ಜಗದೀಶ್ ತಾರಿಪಡ್ಪು,ದಿನೇಶ್ ನಿಟ್ಟಡ್ಕ,ರಕ್ಷಿತ್ ಬಗ್ಯೋಟ್ಟು,ಮಹೇಶ್, ಸತೀಶ್ ಹುಂಬೆಜೆ, ಚಂದಪ್ಪ ಪೂಜಾರಿ ಖಂಡಿಗ, ಗೀರೀಶ್ ನಿಟ್ಟಡ್ಕ, ಪ್ರವೀಣ್ ಪೂಜಾರಿ ಲಾಂತ್ಯಾರು, ಅಶೋಕ್ ಕುಲಾಲ್, ಸತೀಶ್ ದೇವಾಡಿಗ, ಸುಧೀಶ್ ತಾರಿಪಡ್ಪು ಹಾಗೂ ಯುವ ಕಲಾವಿದರು, ಯುವಶಕ್ತಿ ಫ್ರೆಂಡ್ಸ್, ಶ್ರೀಮಾತ ಫ್ರೆಂಡ್ಸ್ ತಂಡದ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.