ಉಜಿರೆ ಶ್ರೀ ಸಾಯಿ ಕ್ರಿಕೆಟರ್ಸ್ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕು ಮಟ್ಟದ 10 ಪ್ರಾಂಚೈಸಿಗಳ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಉಜಿರೆ ಪ್ರೀಮಿಯರ್ ಲೀಗ್ ಸೀಸನ್ -5 ಎ.12 ಹಾಗೂ 13 ರಂದು ಉಜಿರೆ ಎಸ್.ಎಂ ಮೈದಾನದಲ್ಲಿ ನಡೆಯಿತು.

ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸುದೇಶ್ ಶೆಟ್ಟಿ ಕುಂಟಿನಿ, ಉಜಿರೆ ಸಾಯಿ ಕಂಪ್ಯೂಟರ್ಸ್ ನ ಸೂರಜ್, ರೆಹಮಾನ್ ಗೌರವ ಉಪಸ್ಥಿತಿ ವಹಿಸಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಅಸ್ತ್ರ ಗ್ರೂಪ್ಸ್ ನ ಸಿಇಒ ಲಾಂಚುಲಾಲ್ ಕೆ.ಎಸ್ ವಹಿಸಿದ್ದರು. ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ಉಜಿರೆ ಪೂಜಾ ಏಜೆನ್ಸಿ ಮಾಲಕ ರತನ್, ಉಜಿರೆ ಅಸ್ತ್ರ ಫ್ರೆಂಡ್ಸ್ ನ ಸಂತೋಷ್ ವಿ., ಇಂಜಿನಿಯರ್ ಮಧು ಬಿ.ಕೆ ನಿಡ್ಲೆ, ಪೆರ್ಲ ಭಗವತಿ ಕ್ರಿಕೆಟರ್ಸ್ ನ ನಾಗೇಶ್, ಉಜಿರೆ ಶೀತಲ್ ಗಾರ್ಡನ್ ನ ಅಶ್ವತ್ ಶೆಟ್ಟಿ, ಬೆಳ್ತಂಗಡಿ ಶ್ರೀ ದೇವಿ ಎಲೆಕ್ಟ್ರಿಕಲ್ಸ್ ಯೋಗೀಶ್ ದೇವಾಡಿಗ ಗೌರವ ಉಪಸ್ಥಿತಿ ವಹಿಸಿದ್ದರು.
ನಿಡ್ಲೆ ಮನೋಜ್ ಮಾಲಕತ್ವದ ಬರಂಗಾಯ ತಂಡ (ಪ್ರಥಮ) 80,025 ಹಾಗೂ ಶ್ರೀ ಸಾಯಿ ಟ್ರೋಫಿ, ಬೆಳಾಲು ಸೆವೆನ್ ಸ್ಟಾರ್ ತಂಡ(ದ್ವಿತೀಯ) 40,025 ಹಾಗೂ ಶ್ರೀ ಸಾಯಿ ಟ್ರೋಫಿಯನ್ನು ಪಡೆದುಕೊಂಡಿದೆ.