37.5 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ವರದಿ

ಪೆರಾಡಿಯಲ್ಲಿ ಪುರುಷ ಕಟ್ಟುವ ಆಚರಣೆಯ ನೆಪದಲ್ಲಿ ಇಸ್ಲಾಂ ಧರ್ಮಕ್ಕೆ ಅವಹೇಳನ ಆರೋಪ : 17 ಮಂದಿ ಮೇಲೆ ಪ್ರಕರಣ ದಾಖಲು

ಬೆಳ್ತಂಗಡಿ : ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪೆರಾಡಿ ಪರಿಸರದಲ್ಲಿ ಪುರುಷ ಕಟ್ಟುವ ಎಂಬ ಆಚರಣೆಯ ನೆಪದಲ್ಲಿ ಮುಸ್ಲಿಂ ವೇಷ ಧರಿಸಿ ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ (ಸ.ಅ) ಮತ್ತು ಪವಿತ್ರವಾದ ಅಝಾನ್ ಅನ್ನು ಅವಹೇಳನ ಮಾಡಿದ ಪ್ರಕರಣಕ್ಕೆ‌ ಸಂಬಂಧಿಸಿದಂತೆ 17 ಮಂದಿ ಆರೋಪಿಗಳ ವಿರುದ್ದ ಹಾಗೂ ಇದಕ್ಕೆ ಸಹಕರಿಸಿದವರ ವಿರುದ್ದ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಫೋಟೋ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವೇಣೂರು ಬ್ಲಾಕ್ ಸಮಿತಿ ವತಿಯಿಂದ ದೂರು .

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ಮನೆ ನಿವಾಸಿ ಮಹಮ್ಮದ್ ರಫೀಕ್ ಎಂಬವರು ನೀಡಿರುವ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಸಾವ್ಯ ಮತ್ತು ಪೆರಾಡಿ ಪರಿಸರದ ನಿವಾಸಿಗಳಾದ ವಸಂತ, ರಾಜೇಶ್, ಹರೀಶ್, ದಯಾನಂದ, ರಂಗನಾಥ, ಮೋಹನ್, ಶಮಿತ್, ರವಿ, ರಮೇಶ್ ಕುಲಾಲ್, ಸುರೇಶ್, ಅಶೋಕ ಕುಲಾಲ್, ಧನುಷ್ ಹರದೊಟ್ಟು, ಹರೀಶ್ ಬಂತೊಟ್ಟು, ರಮೇಶ್ ಆರ್.ಕೆ, ಸುರೇಶ್ ಬರೊಟ್ಟು, ಪ್ರಮೋದ್, ಪ್ರಕಾಶ್ ಪೆರಾಡಿ ಮತ್ತು ಇತರರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.


ಏ.14 ರಂದು ರಾತ್ರಿಯ ವೇಳೆ ಪುರುಷ ಕಟ್ಟುನ‌ ಎಂಬ ಆಚರಣೆಯ ನೆಪದಲ್ಲಿ ಮುಸ್ಲಿಂ ವೇಷ ಧರಿಸಿಕೊಂಡು ಇಸ್ಲಾಂ ಧರ್ಮ, ಪ್ರವಾದಿ ಹಾಗೂ ಆಝಾನ್ ಅನ್ನು ಅವಹೇಳನ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಬಗ್ಗೆ ಕಲಂ 353(2) ಜೊತೆಗೆ 3(5) ಬಿ.ಎನ್.ಎಸ್ 2023 ರಂತೆ ಏ.17 ರಂದು ಪ್ರಕರಣ ದಾಖಲಿಸಲಾಗಿದೆ.

Related posts

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲದಿಂದ 31ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ

Suddi Udaya

ನ.21 : ವಿದ್ಯುತ್ ನಿಲುಗಡೆ

Suddi Udaya

ಮಡಂತ್ಯಾರು: ಬಿದ್ದ ಪರ್ಸ್ ಹಿಂದುರುಗಿಸಿ ಕೊಟ್ಟು ಮಾನವೀಯತೆ ಮೆರೆದ ಆಟೋ ಚಾಲಕ ಇರ್ಷಾದ್

Suddi Udaya

ನಡ ಸ.ಹಿ.ಪ್ರಾ. ಶಾಲೆಗೆ ರೂ.1.17 ಕೋಟಿ ವೆಚ್ಚದ ನೂತನ ಕಟ್ಟಡ ಉದ್ಘಾಟನೆ

Suddi Udaya

ಚಿಬಿದ್ರೆ: ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Suddi Udaya
error: Content is protected !!