April 21, 2025
ಗ್ರಾಮಾಂತರ ಸುದ್ದಿ

ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ ಬೆಳ್ತಂಗಡಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ, ಹಾಗೂ ಮಹಿಳಾ ಸಂಘ ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ : ಪರಮ ಪೂಜ್ಯ ಶ್ರೀ ಪೂರ್ಣಾನಂದ ಸ್ವಾಮಿಗಳ ಆರಾಧನಾ ಮಹೋತ್ಸವ

ಬೆಳ್ತಂಗಡಿ: ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ ರಿ. ಬೆಳ್ತಂಗಡಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ, ಹಾಗೂ ಮಹಿಳಾ ಸಂಘ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಎ.17 ರಂದು ನಡೆದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಪೂರ್ಣಾನಂದ ಸ್ವಾಮಿಗಳ ಆರಾಧನಾ ಮಹೋತ್ಸವ ಸಮಾರಂಭವು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪುಂಜಾಲಕಟ್ಟೆಯ ಶ್ರೀ ಗೋಪಾಲಕಷ್ಣ ದೇವಸ್ಥಾನದ ರಾಧಾಕೃಷ್ಣ ಸಭಾ ಭವನದಲ್ಲಿ ಶ್ರೀ ಪ್ರಭಾಕರ ಭಟ್ ಇವರ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು. ಮಂಗಳೂರಿನ ಪರಮತಾಳ ಭಜನಾ ತಂಡದ ಶ್ರೀಮತಿ ಸುಜಾತಾ ಸಾಮಂತ್, ರಂಜಿತಾ ನಾಯಕ್, ಶ್ವೇತಾ ಕಾಮತ್ ಹಾಗು ನಮ್ಮ ಸಂಘದ ಸದಸ್ಯರು ಸುಮಧುರ ಹಾಗೂ ಭಕ್ತಿಪೂರ್ವಕ ಭಜನಾ ಸೇವೆಯನ್ನು ನಡೆಸಿಕೊಟ್ಟರು. ನಮ್ಮ ಸಮಾಜದ ಸುಮಾರು 175 ಜನ ಜಾತಿ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ

ಗೌರವಾನ್ವಿತರಾದ ಸರ್ವಶ್ರೀ ರಮೇಶ ನಾಯಕ್ ಮೈರ, ಗಣಪತಿ ಶೆಣೈ ಡೆಚ್ಚಾರು, ಮೋಹನ್ ಪ್ರಭು ಪೆರ್ಮರೋಡಿ, ಪೂರ್ಣಿಮಾ ನಾಯಕ್, ಮಾಲತಿ ಪ್ರಭು, ಕಸ್ತೂರಿ ನಾಯಕ್, ಪ್ರಭಾಕರ ಭಟ್ ಇಡ್ಯಾ ಉಪಸ್ಥಿತರಿದ್ದರು. ಶ್ರೀ ಸುಧಾಕರ ಪ್ರಭು ಪೆರ್ಮರೋಡಿ ವರದಿ ವಾಚಿಸಿದರು. ಸಂಚಾಲಕರಾದ ದಯಾನಂದ ನಾಯಕ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಕ್ಕೆ ಸಂಘದ ಅಧ್ಯಕ್ಷ ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರಭಾಕರ ಪ್ರಭು ಮುದಲಡ್ಕ, ಪ್ರಧಾನ ಕಾರ್ಯದರ್ಶಿಗಳಾಗಿ ಹರೀಶ್ ಪ್ರಭು ಗುಂಡಿದಡ್ಡ ಹಾಗೂ ಕೋಶಾಧಿಕಾರಿಯಾಗಿ ಪ್ರದೀಪ್ ನಾಯಕ್ ಬಲ್ಕತ್ಯಾರು ಅವಿರೋಧವಾಗಿ ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.ಈ ಎಲ್ಲಾ ಕಾರ್ಯಕ್ರಮಗಳು ಸಂಚಾಲಕರಾದ ದಯಾನಂದ ನಾಯಕ್ ಪೂಂಜಾಲಕಟ್ಟೆ ಹಾಗೂ ಗೌರವಾನ್ವಿತ ಶ್ರೀ ಸುಧಾಕರ ಪ್ರಭು ಪೆರ್ಮರೋಡಿ ಇವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು..

Related posts

ರಕ್ತಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಎರಡು ವರ್ಷದ ಮಗುವಿನ ಚಿಕಿತ್ಸೆಗೆ ನೆರವಾಗಿ

Suddi Udaya

ಆರಂಬೋಡಿ 135 ನೇ ಬೂತ್ ನಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಬಲಿದಾನ್ ದಿವಸ್ ಆಚರಣೆ

Suddi Udaya

ಮಿತ್ತಬಾಗಿಲು ಗ್ರಾ.ಪಂ. ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕಸ್ತೂರಿ ರಂಗನ್ ವರದಿ ವಿರೋಧಿಸಿ ನೆರಿಯ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ಡಿ.19: ನವಚೇತನಾ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ (ನಿ.) ವಾರ್ಷಿಕ ಸಾಮಾನ್ಯ ಸಭೆ ಹಾಗೂ ನೂತನ ಕಟ್ಟಡದ ಉದ್ಘಾಟನೆ

Suddi Udaya

ಗರ್ಡಾಡಿ ನಂದಿಬೆಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya
error: Content is protected !!