
ಬೆಳ್ತಂಗಡಿ : ಕೊಯ್ಯೂರು ಶ್ರೀ ವಿಷ್ಣುಮೂರ್ತಿ ಜೋಗಿ ಪುರುಷರ ಸಂಘದ ವತಿಯಿಂದ ಸುಮಾರು 75 ವರ್ಷದ ಇತಿಹಾಸ ಇರುವ ಪುರುಷರು ತುಳುನಾಡಿ ಪ್ರದರ್ಶನ ಕಲೆ,ಸುಗ್ಗಿ ಕುಣಿತ,ಪುರುಷರೇ ಕಟ್ಟುನ ಆಚರಣೆ ಹಾಗೂ ಪುರುಷರ ರಾಶಿ ಪೂಜೆ ಎ.16 ರಂದು ಮೇಗಿನ ಬಜಿಲ ಲಕ್ಷ್ಮಣ ಗೌಡ ಮನೆಯಂಗಳದಲ್ಲಿ ನಡೆಯಿತು.

ಹಿರಿಯ ಕಲಾವಿದರಿಗೆ ಸನ್ಮಾನ:
ಕೊಯ್ಯೂರು ಪುರುಷರ ಹಿರಿಯ 7 ಜನ ಕಲಾವಿದರಿಗೆ ಸನ್ಮಾನ ಹಾಗೂ ಕೊಯ್ಯೂರು ಗ್ರಾಮದ ದೆಂತ್ಯಾರು ಜೀರ್ಣೋದ್ಧಾರ ಹಂತ ದಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ 5 ಕಬ್ಬಿಣದ ಟೇಬಲ್ ಹಾಗೂ 50 ಪ್ಲಾಸ್ಟಿಕ್ ಕುರ್ಚಿ ಗಳನ್ನು ಕೊಡುಗೆಯಾಗಿ ಸಂಘದ ವತಿಯಿಂದ ನೀಡಿದರು.

ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮವಹಿಸಿ ತುಳುನಾಡಿನ ಶ್ರೇಷ್ಠ ಜಾನಪದ ಕಲೆಗಳಲ್ಲಿ ಪುರುಷ ಕಟ್ಟುವ ಸಂಪ್ರದಾಯ ಮೀನ (ಸುಗ್ಗಿ) ತಿಂಗಳ ಹುಣ್ಣಿಮೆ ಸಂದರ್ಭದಲ್ಲಿ ಪುಂಡು ಪುರುಷರ ವಿವಿಧ ವೇಷಧಾರಿಗಳು ಮನೆ ಮನೆಗೆ ಭೇಟಿ ನೀಡಿ ಪುರುಷ ಕಟ್ಟುವ ಪದ್ಧತಿಯಲ್ಲಿ ತೊಡಗಿಸಿ
ಕೊಂಡಿರುವ ಹಿರಿಯರಾದ ಮೋನಪ್ಪ ಸಾಲಿಯನ್ ಬಜಿಲ,ರಾಮಣ್ಣ ಗೌಡ ಡೆಂಬುಗ,ಮೋನಪ್ಪ ಗೌಡ ಬಜಿಲ,ಹರಿಯಪ್ಫ ಗೌಡ ಬರಮೇಲು,ಮುಕುಂದ ಗೌಡ. ಬಜಿಲ,ರಾಮಣ್ಣ ಗೌಡ ತಾರಿಕೋಡಿ,ಪೆರ್ನು ಗೌಡ ಸಹೋದರ ಮಾಧವ ಗೌಡ ಬೆಲ್ಡೆ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ,ಗೌರವಿಸಿದರು.
ಪುರುಷರ ಸಂಘದ ಅಧ್ಯಕ್ಷ ಮೇಗಿನ ಬಜಿಲ ಲಕ್ಷ್ಮಣ ಗೌಡ ಅಧ್ಯಕ್ಷತೆ ವಹಿಸಿದ್ದರು.

ಕೊಯ್ಯೂರು ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಎ.ಬ್ಯಾಂಕ್ ನಿವೃತ್ತ ಸಿ.ಒ. ತಿಮ್ಮಯ್ಯ ಗೌಡ,ಪ್ರಧಾನ ಕಾರ್ಯದರ್ಶಿ ಶ್ರೀ ಕ್ಷೇತ್ರ.ಧ.ಗ್ರಾಮ ಅಭಿವೃದ್ದಿ ಯೋಜನೆ ಉಡುಪಿ ಜಿಲ್ಲಾ ನಿರ್ದೇಶಕ ದುಗ್ಗೇ ಗೌಡ, ಅನುವಂಶಿಕ ಅಡಳಿತ ಮೊಕ್ತೇಸರು ಕುಕ್ಕಪ್ಪ ಗೌಡ ಡೆಂಬುಗ,ಯಾದವ ಗೌಡ ತೋಟ, ಕೊಯ್ಯೂರು ಸರಕಾರಿ ಪ್ರಥಮ ದರ್ಜೆಯ ಕಾಲೇಜು ಪ್ರಾಂಶುಪಾಲ ಮೋಹನ ಗೌಡ ಭಂಡಾರಿಕೋಡಿ ವೆಂಕಪ್ಪಗೌಡ ಕೊರ್ಯಾರು,ತಾರಾನಾಥ ಗೌಡ ಮೇಗಿನ ಬಜಿಲ ಉಪಸ್ಥಿತರಿದ್ದರು.
ಡಾ.ದಿವಾ ಕೊಕ್ಕಡ, ಕೊಯ್ಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಗೌಡ ಬಜಿಲ,

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾರಾಮಣ್ಣ ಗೌಡ,
ಸ್ಥಳೀಯರಾದ ಕೂಸಪ್ಪ ಪೂಜಾರಿ ಬಜಿಲ,ಚಂದಪ್ಪ ಗೌಡ ಬೆರ್ಕೆ,ಭಜನಾ ಮಂಡಳಿ ರಾಜ್ಯ ಅಧ್ಯಕ್ಷ ಚಂದ್ರ ಶೇಖರ ಸಾಲಿಯನ್ ಮತ್ತಿತರರಿದ್ದರು.
ಭರತ್ ಗೌಡ ಡೆಂಬುಗ ನಿರೂಪಣೆ ಮಾಡಿದರು. ತಾರಾನಾಥ ಬಜಿಲ ಸ್ವಾಗತಿಸಿ,ದಾಮೋದರ ಗೌಡ ಬೆರ್ಕೆ ವಂದಿಸಿದರು.