ಕುವೆಟ್ಟು: ಮದ್ದಡ್ಕ ತಾಯಿ ಚಾಮುಂಡಿ ದೈವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ವೇದಮೂರ್ತಿ ಬಾಲಕೃಷ್ಣ ಪಾಂಗಣ್ಣಾಯ ರವರ ನೇತೃತ್ವದಲ್ಲಿ ಪ್ರಾಯಶ್ಚಿತ ಹೋಮ ದೈವಗಳನ್ನು ವೈದಿಕ ವಿಧಿ ವಿಧಾನಗಳೊಂದಿಗೆ ಸಂಕೋಚ ಮಾಡಿ ಬಾಲಾಲಯದಲ್ಲಿ ಪ್ರತಿಷ್ಠೆ ಏ 20 ಮತ್ತು 21 ರoದು ಜರಗಿತು.

ಅನುವಂಶಿಕ ಆಡಳಿತ ಮೊಕ್ತೇಸರರು ಮೋಹನ ಕೆರ್ಮುಣ್ಣಾಯ ಮೈರಾರು ಮನೆ, ಶ್ರೀನಿವಾಸ ಅಮ್ಮುಣ್ಣಾಯ ಅಸ್ರಣ್ಣರು ಮೂಡುಮನೆ, ರಘುರಾಮ್ ಭಟ್ ಅಸ್ರಣ್ಣರು ಮಠ ಮನೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ದಿನಗಳಲ್ಲಿ ದೇವಸ್ಥಾನದ ವಠಾರದಲ್ಲಿ ಜೀರ್ಣೋದ್ಧಾರದ ಅಂಗವಾಗಿ ಪ್ರಶ್ನಾ ಚಿಂತನೆ ನಡೆಸಿ ಸಂಬಂಧಪಟ್ಟ ಗ್ರಾಮದ ಭಕ್ತಾಭಿಮಾನಿಗಳ ಸಭೆಯನ್ನು ಕರೆದು ಜೀರ್ಣೋದ್ಧಾರದ ಮುಂದಿನ ಕಾರ್ಯಗಳ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ತಿಳಿಸಿದರು.