September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಪೊಲೀಸ್

ಮಾಚಾರು: ಕೊಲೆಯತ್ನ ಪ್ರಕರಣ ಆರೋಪಿಗಳಿಗೆ ಹೈಕೋರ್ಟ್ ಜಾಮೀನು

ಬೆಳ್ತಂಗಡಿ: ಉಜಿರೆ ಗ್ರಾಮದ ಮಾಚಾರು ಎಂಬಲ್ಲಿ ಹಣದ ವಿಚಾರದಲ್ಲಿ ಯುವಕರ ವಿರುದ್ದ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣದ ಆರೋಪಿಗಳಿಗೆ ಕರ್ನಾಟಕ ಹೈ ಕೋರ್ಟ್ ಜಾಮೀನು ನೀಡಿದೆ.ಘಟನೆ ಆಧರಿಸಿ ಬೆಳ್ತಂಗಡಿ ಪೋಲಿಸರು ಮೂವರು ಆರೋಪಿಗಳ ವಿರುದ್ದ ಭಾರತೀಯ ನ್ಯಾಯ ಸಂಹಿತೆ, ಕಲಂ 109,351(2) ಜೊತೆ 3(5) ಕೊಲೆಯತ್ನ ಪ್ರಕರಣ ದಾಖಲಿಸಿದ್ದರು.

ಇದೀಗ ಮೊದಲ ಆರೋಪಿ, ನ್ಯಾಯಾಂಗ ಬಂಧನದಲ್ಲಿರುವ ಹಮೀದ್ ಎಂಬವರಿಗೆ ನಿಯಮಿತ ಜಾಮೀನು ಮತ್ತು ಎರಡನೇ ಆರೋಪಿ ರಿಯಾಝ್ ಮತ್ತು ಮೂರನೇ ಆರೋಪಿ ಅರ್ಷಾದ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಸದ್ರಿ ಪ್ರಕರಣ ಕಳೆದ ಫೆಬ್ರವರಿ 5 ರಂದು ಮಾಚಾರಿನಲ್ಲಿ ನಡೆದಿತ್ತು. ಈ ಪ್ರಕರಣದಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು ಇನ್ನೋರ್ವ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುತ್ತಾನೆ.

ಎ.21ರಂದು ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಇದ್ದ ಪೀಠವು ಈ ಜಾಮೀನು ಮಂಜೂರು ಮಾಡಿತು.ಆರೋಪಿಗಳ ಪರ ಹೈಕೋರ್ಟ್ ವಕೀಲರುಗಳಾದ ಮುಸ್ತಫಾ ಬೆಳ್ತಂಗಡಿ, ಅನ್ವರ್ ಕೆ.ಪಿ ಕುಪ್ಪೆಟ್ಟಿ ಮತ್ತು ಮೋನಿಸ್ ಸಾಹುಕರ್ ವಾದವನ್ನು ಮಂಡಿಸಿದ್ದಾರೆ.

Related posts

ಗುರುವಾಯನಕೆರೆ ಶ್ರೀಶಾರದಾಂಭ ಭಜನಾ ಮಂಡಳಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ಕೊಕ್ಕಡ: ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ

Suddi Udaya

ಯೆನೆಪೋಯ ‘ಡಿಪಾರ್ಟ್‌ಮೆಂಟ್ ಆಫ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್’ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಉಜಿರೆಯ ಅಮ್ರೀನ್ ಹಮೀದ್ ಆಯ್ಕೆ‌

Suddi Udaya

ಬಾರ್ಯ: ಆನೆಪಲ್ಲ ನಿವಾಸಿ ಇಲ್ಯಾಸ್ ನಿಧನ

Suddi Udaya

ಬೆಳ್ತಂಗಡಿ ಭಾರತಿಯ ಜೈನ್ ಮಿಲನ್ ವಲಯ 8ರ ವಾರ್ಷಿಕ ಮಹಾಸಭೆ

Suddi Udaya

ಮುಂಡಾಜೆ: ಎರಡು ಕಾರುಗಳು ಮುಖಾಮುಖಿ ಡಿಕ್ಕಿ

Suddi Udaya
error: Content is protected !!