ಬೆಳ್ತಂಗಡಿ: ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಉಗ್ರಗಾಮಿ ದಾಳಿ ಆಘಾತಕಾರಿ. ಈ ಭಯೋತ್ಪಾದಕ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ,
ಈ ಕೂಡಲೇ ಕೇಂದ್ರ ಸರ್ಕಾರ ನಾವು “ಬಯಸುವ ನ್ಯಾಯ”ವನ್ನು ಒದಗಿಸುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಗೃಹಸಚಿವರಾದ ಅಮಿತ್ ಷಾ ಕೈಗೊಳ್ಳುತ್ತಾರೆ.
ನೆನಪಿಡಿ, ಎಲ್ಲಿಯವರೆಗೆ ಮತವೊಂದು ಇತರ ಮತದವರನ್ನು ಕೊಲ್ಲುವುದೇ ತಮ್ಮ ಮತದ ಉಳಿವಿಗೆ ದಾರಿ ಎಂದು ತನ್ನ ಸಮುದಾಯದವರಿಗೆ ಬೋಧಿಸುತ್ತಿರುತ್ತದೋ, ಅಲ್ಲಿಯವರೆಗೆ ಈ ಎಲ್ಲರಿಗೂ ಆಪತ್ತು ತಪ್ಪಿದ್ದಲ್ಲ.
ಇಸ್ಲಾಂಗೂ ಭಯೋತ್ಪಾದಕರಿಗೂ ಸಂಬAಧ ಇಲ್ಲ ಎಂದು ಒಪ್ಪಿಕೊಳ್ಳೋಣ, ಹುಡುಕಿ ಹುಡುಕಿ ಹಿಂದುಗಳನ್ನ ಕೊಂದು ಆ ರಾಕ್ಷಸರು ಮೊಳಗಿಸಿದ ಉದ್ಘೋಷ ಏನು ಸಂದೇಶ ಸಾರುತ್ತದೆ ಎಂದು ಯೋಚಿಸಬೇಕಾಗಿದೆ.
ಕೇಡು ವಿಜೃಂಭಿಸುವಾಗ ಪ್ರತಿಘಾತ ಮಾಡದ ಸಾತ್ವಿಕತೆ/ಮೌನ ನಿಷ್ಪçಯೋಜಕವಾಗುತ್ತದೆ. ಕೇವಲ ಹತ್ತು ಜನ ಕೆಟ್ಟವರಿಗಾಗಿ ಒಂದು ಸಮುದಾಯಕ್ಕೆ ಭಯೋತ್ಪಾದನೆಯ ಕಳಂಕ ಹಾಕಬಾರದು ಎನ್ನುತ್ತಾರೆ. ಹತ್ತು ಕೆಟ್ಟವರನ್ನ ಬಿಡಿ ಉಳಿದ ೯೦ ಒಳ್ಳೆಯ ಮುಸಲ್ಮಾನರಲ್ಲಿ ಒಬ್ಬರು ಧ್ವನಿಯೆತ್ತಿ ಖಂಡಿಸಿದ್ದನ್ನು ಕೇಳಲೇ ಇಲ್ಲ, ಇದು ದುರಂತ. ಘಟನೆಯನ್ನು ಖಂಡಿಸಿ ಬೀದಿಗೆ ಇಳಿದಿದ್ದನ್ನು ಕಾಣಲಿಲ್ಲ. ಸಾತ್ವಿಕ ಮುಸಲ್ಮಾನ್ ಬಂಧುಗಳೇ, ಇದು ನಿಮಗೂ ಎಚ್ಚರಿಕೆಯ ಕರೆಗಂಟೆ. ನಿಮ್ಮ ಮೌನ ನಿಮ್ಮನ್ನೇ ಕಾಡಲಿದೆ. ನಿಮ್ಮ ಮತದೊಳಗಿನ ಕೊಳಕನ್ನು ನೀವಿನ್ನು ಸಹಾನುಭೂತಿಯಿಂದ ನೋಡುತ್ತಾ ಕುಳಿತರೆ ಮುಂದಾಗುವ ಎಲ್ಲಾ ಅನಾಹುತಗಳಲ್ಲಿ ನೀವೂ ಪಾಲುದಾರರಾಗುತ್ತೀರಿ. ನಿಮ್ಮ ಮೌನವೇ ಉಗ್ರಗಾಮಿಗಳಿಗೆ ಶ್ರೀರಕ್ಷೆ ಆಗದಂತೆ ನೋಡಿಕೊಳ್ಳಿ ಎಂದು ಶಾಸಕ ಹರೀಶ್ ಪೂಂಜರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.