March 7, 2026
Uncategorized

ಬೆಳ್ತಂಗಡಿ ವಕೀಲರ ಸಂಘ ವತಿಯಿಂದ ಪಹಾಲ್ ಗಾಮ್ ದಾಳಿಗೆ ಖಂಡನೆ ಹಾಗೂ ಶ್ರದ್ಧಾಂಜಲಿ ಸಭೆ

ಬೆಳ್ತಂಗಡಿ : ವಕೀಲರ ಸಂಘ ಬೆಳ್ತಂಗಡಿ ವತಿಯಿಂದ ಪಹಾಲ್ ಗಾಮ್ ಧಾಳಿ ಯ ಬಗ್ಗೆ ಖಂಡನಾ ಸಭೆ ಹಾಗೂ ಶ್ರದ್ಧಾಂಜಲಿ ಸಭೆ ನಡೆಯಿತು.

ಪಹಾಲ್ ಗಾಮ್ ನಲ್ಲಿ ಭಯೋತ್ಪಾದಕರು ಪ್ರವಾಸಿಗರು ಹಾಗೂ ಅಮಾಯಕರ ಮೇಲೆ ನಡೆಸಿದ ದಾಳಿ ಬಗ್ಗೆ ವಕೀಲರ ಸಂಘವು ಸಭೆಯನ್ನು ನಡಿಸಿ ಅತ್ಯುಗ್ರವಾಗಿ ಖಂಡಿಸಿದೆ. ಸಭೆಯಲ್ಲಿ ಹಿರಿಯ ವಕೀಲರಾದ ಸುಬ್ರಮಣ್ಯ ಕುಮಾರ್ ಅಗರ್ತ ಮಾತನಾಡುತ್ತ ಈ ತರಹದ ಕೃತ್ಯಗಳು ನಡೆದಾಗ ನಾವೆಲ್ಲರು ಜಾತಿ, ಧರ್ಮ, ಪಕ್ಷ ಹಾಗೂ ಮನಸ್ತಾಪಗಳನ್ನು ಮರೆತು ಒಗ್ಗಟ್ಟಾಗಿ ಖಂಡಿಸಿ ನಾವು ಸರಕಾರದ ಜೊತೆ ದೇಶದ ಜೊತೆ ನಿಲ್ಲಬೇಕು ಎಂದು ತಮ್ಮ ಮಾತಲ್ಲಿ ತಿಳಿಸಿದರು. ಹಿರಿಯ ವಕೀಲರಾದ ಶಿವಕುಮಾರ್ ಎಸ್ ಎಂ ಮಾತನಾಡುತ್ತ ಇದು ನಮ್ಮ ದೇಶದ ಮೇಲೆ ಆಗಿರುವ ದಾಳಿಯಾಗಿದೆ. ಪ್ರವಾಸೋದ್ಯಮ ಉತ್ತುಂಗಲ್ಲಿರುವಾಗ ಅದನ್ನು ಸಹಿಸದೆ ಈ ಕೃತ್ಯ ಎಸಗಲಾಗಿದೆ. ನಾವು ಎಲ್ಲರೂ ಒಂದಾಗಿ ಇದನ್ನು ಖಂಡಿಸ ಬೇಕಾಗಿದೆ ಎಂದರು.ಅಧ್ಯಕ್ಷರಾದ ವಸಂತ ಮರಕಡ ಈ ಕೃತ್ಯವನ್ನು ಖಂಡಿಸುತ್ತಾ ಈ ದಾಳಿಯು ನಮ್ಮ ದೇಶದ ಮೇಲೆ ಹೇಡಿಗಳು ಮಾಡಿರುವ ದಾಳಿಯಾಗಿದೆ, ಇದರ ಬಗ್ಗೆ ವಾಟ್ಸಪ್ಪ್, ಫೇಸ್ಬುಕ್ ಗಳಲ್ಲಿ ದಾಳಿಕೊರರರು ಮಾಡಿರುವ ಕೃತ್ಯವನ್ನು ಸಮರ್ಥಿಸುವವರನ್ನು ಸಮಾಜ ಬಹಿಷ್ಕರಿಸಬೇಕು, ಖಂಡಿಸ್ಬೇಕು ಅವರೆಲ್ಲರೂ ದೇಶದ್ರೋಹಿಗಳು ಎಂದು ಹೇಳಿದರು.

ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾದ ಅಶೋಕ್ ಕರಿಯನೆಲ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ ನವೀನ್ ಬಿ.ಕೆ ಮಾತನಾಡಿದರು.

ಸಭೆಯಲ್ಲಿ ಸಂಘದ ಪದಾಧಿಕಾರಿಗಳು, ಹಿರಿಯ ಕಿರಿಯ ವಕೀಲರಗಳು, ಸರಕಾರಿ ವಕೀಲರುಗಳು ಹಾಜರಿದ್ದರು.

Related posts

ಗುರುವಾಯನಕೆರೆ:ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ: ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಣೆ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶ ದಾನ

Suddi Udaya

ಯಕ್ಷದ್ರುವ ಪಟ್ಲ ಫೌಂಡೇಶನ್ ಮಂಗಳೂರು ಬೆಳ್ತಂಗಡಿ ಘಟಕದ ಸಹಯೋಗದಲ್ಲಿ ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಅಭಿಯಾನ ಉದ್ಘಾಟನೆ

Suddi Udaya

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನ ಮoದಿರಕ್ಕೆ ಶ್ರೀಮತಿ ಲಾವಣ್ಯ ಬಲ್ಲಾಳ್ ಭೇಟಿ

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್ 8 ಮಂದಿ ಪೌರ ಕಾರ್ಮಿಕರ ನೇರ ನೇಮಕಾತಿ

Suddi Udaya

ವೇಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ ಹೆಗ್ಡೆ ನಿಧನ

Suddi Udaya
error: Content is protected !!