41.3 C
ಪುತ್ತೂರು, ಬೆಳ್ತಂಗಡಿ
April 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಇನ್ವರ್ಟರ್ ನೀಡುವಂತೆ ಮನೆಗೆ ಕೇಳಲು ಹೋಗಿದ್ದವರಿಗೆ ಕತ್ತಿಯಿಂದ ಹಲ್ಲೆ

ಕಾಶಿಪಟ್ಣ: ಇನ್ವರ್ಟರ್ ನೀಡುವಂತೆ ಮನೆ ಬಳಿಗೆ ಹೋಗಿದ್ದವರಿಗೆ ಕತ್ತಿಯಿಂದ ಕಡಿದು, ಟಾರ್ಚ್ ಲೈಟ್‌ನಿಂದ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ ಘಟನೆ ಎ.24 ರಂದು ರಾತ್ರಿ ಕಾಶಿಪಟ್ಣ ಗ್ರಾಮದ ಮಿತ್ತೊಟ್ಟು ಎಂಬಲ್ಲಿ ಸಂಭವಿಸಿದೆ.

ಮರೋಡಿ ಗ್ರಾಮದ ಪೆಂಚಾರ್ ಪಿಜತಕಟ್ಟೆ ನಿವಾಸಿ ಸುಜಿತ್ ಎಂಬವರೊಂದಿಗೆ ಕಾಶಿಪಟ್ಣ ಗ್ರಾಮದ ಮಿತ್ತೊಟ್ಟು ಅಭಿಷೇಕ್ ಕೆಲಸ ಮಾಡಿಕೊಂಡಿದ್ದು, ಅಭಿಷೇಕ್‌ನ ಮನೆಯಲ್ಲಿ ಇಟ್ಟಿದ್ದ ಇನವರ್ಟರ್‌ನ್ನು ವಾಪಾಸು ಅಂಗಡಿಗೆ ತಂದುಕೊಡುವಂತೆ ಸುಜಿತ್ ಕೇಳಿದಾಗ ಬೇಕಾದಲ್ಲಿ ಮನೆಗೆ ಬಂದು ತೆಗೆದುಕೊಂಡು ಹೋಗುವಂತೆ ಅಭಿಷೇಕ್ ತಿಳಿಸಿದ್ದನೆನ್ನಲಾಗಿದೆ.


ಅದರಂತೆ ಎ.24 ರಂದು ರಾತ್ರಿ 10 ಗಂಟೆಗೆ ಸುಜಿತ್ ತನ್ನ ಸ್ನೇಹಿತರಾದ ಆಕಾಶ್, ಜಗದೀಶ @ ಜಗ್ಗು, ಸಂಜಯ್ ಮತ್ತು ಸವಿನ್ ಎಂಬವರೊಂದಿಗೆ ಕಾಶಿಪಟ್ಣ ಮಿತ್ತೊಟ್ಟು ಅಭಿಷೇಕ್‌ನ ಮನೆಯ ಬಳಿಗೆ ಬಂದು ಇನ್ ವರ್ಟರ್ ಕೇಳಿದಾಗ, ಅಭಿಷೇಕ್ ಇನವರ್ಟರ್ ಕೊಡುವುದಿಲ್ಲ, ನೀನು ಏನು ಮಾಡುತ್ತೀಯಾ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದಾಗ, ಅವರೊಳಗೆ ಮಾತಿನ ಚಕಮಕಿ ನಡೆದು ಅಲ್ಲಿಗೆ ಬಂದ ಅಭಿಷೇಕ್‌ನ ತಂದೆ ಧರ್ಣಪ್ಪ ಪೂಜಾರಿ ಎಂಬವರು ಜಗ್ಗು @ ಜಗದೀಶನಿಗೆ ಟಾರ್ಚ್ ಲೈಟ್ ಹಲ್ಲೆ ನಡೆಸಿ, ಅಭಿಷೇಕನನ್ನು ಮನೆಗೆ ಕರೆದುಕೊಂಡು ಹೋಗಿದ್ದು, ಆ ಸಮಯ ಮನೆಯ ಗೇಟಿನ ಬಳಿ ಸುಜಿತ್, ಅಭಿಷೇಕ್ ನಲ್ಲಿ ಇನ್ ವರ್ಟರ್ ಕೊಡು ಎಂದಾಗ ಅಭಿಷೇಕನು ಕತ್ತಿಯಿಂದ ಸುಜಿತ್ ಹಾಗೂ ಆಕಾಶ್‌ಗೆ ಕಡಿದು, ಧರ್ಣಪ್ಪ ಪೂಜಾರಿ ಟಾರ್ಚ್ ಲೈಟ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ವೇಣೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕನ್ಯಾಡಿ : ಶ್ರೀ ರಾಮ ಕ್ಷೇತ್ರದಲ್ಲಿ ಚಂದ್ರಮಂಡಲ ರಥೋತ್ಸವ

Suddi Udaya

ಅ.6: ಬಳಂಜದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ ಸಾರ್ವಜನಿಕ ಶ್ರೀ ಶಾರದೋತ್ಸವ

Suddi Udaya

ಸರಕಾರಿ ನೌಕರರ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ: ಹೇಮಚಂದ್ರರಿಗೆ ಪ್ರಥಮ ಸ್ಥಾನ

Suddi Udaya

ಭಾರಿ ಮಳೆ ನಾಳೆ (ಜೂ.27) ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

Suddi Udaya

ತೆಕ್ಕಾರು ಗ್ರಾ.ಪಂ ಸಿಬ್ಬಂದಿ ಮೇಲೆ ಸದಸ್ಯೆಯ ತಂಡದಿಂದ ಹಲ್ಲೆ: ಎಸ್‌ಡಿಪಿಐ ತೆಕ್ಕಾರು ಗ್ರಾಮ ಸಮಿತಿ ಖಂಡನೆ

Suddi Udaya

ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪದಾಧಿಕಾರಿಗಳುಅರಣ್ಯವಾಸಿಗಳ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಸಲ್ಲಿಕೆ

Suddi Udaya
error: Content is protected !!