ಬೆಳ್ತಂಗಡಿ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಡಿಕೆಎಂಯುಎಲ್) ಆಡಳಿತ ಮಂಡಳಿಗೆ ಏ.26ರಂದು ಚುನಾವಣೆ ನಡೆಯಲಿದೆ. ಒಟ್ಟು. 16 ನಿರ್ದೇಶಕ ಸ್ಥಾನಗಳಿಗೆ 41 ಮಂದಿ ಅಂತಿಮ ಕಣದಲ್ಲಿದ್ದಾರೆ. ಏ.20 ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿತ್ತು.
ದ.ಕ. ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ಸಂಬಂಧಿಸಿ ಸಹಕಾರ ಭಾರತಿ ಹಾಗೂ ಸಹಕಾರಿ ಕ್ಷೇತ್ರದ ಪ್ರಮುಖರ ಮಧ್ಯೆ ಮಾತುಕತೆ ನಡೆದಿತ್ತು. ಆದರೆ ಒಮ್ಮತದ ಆಯ್ಕೆ ಸಾಧ್ಯವಾಗದ ಕಾರಣ ಚುನಾವಣೆ ಅನಿವಾರ್ಯವಾಗಿದೆ. ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ರವಿರಾಜ ಎನ್. ಶೆಟ್ಟಿ, ರವಿರಾಜ ಹೆಗ್ಡೆ, ಮಾಜಿ ಉಪಾಧ್ಯಕ್ಷರಾದ ಎಸ್.ಬಿ.ಜಯರಾಮ ರೈ, ಎಸ್. ಪ್ರಕಾಶ್‌ಚಂದ್ರ ಶೆಟ್ಟಿ ಮತ್ತೆ ಸ್ಪರ್ಧಾ ಕಣದಲ್ಲಿದ್ದಾರೆ.
ಕುಂದಾಪುರ ಉಪ ವಿಭಾಗದ 7 ಸಾಮಾನ್ಯ ಸ್ಥಾನಕ್ಕೆ 21 ಮಂದಿ, ಪುತ್ತೂರು ವಿಭಾಗದ 4 ಸಾಮಾನ್ಯ ಸ್ಥಾನಕ್ಕೆ 7 ಮಂದಿ ಹಾಗೂ ಮಂಗಳೂರು ವಿಭಾಗದ 3 ಸಾಮಾನ್ಯ ಸ್ಥಾನಕ್ಕೆ 6 ಮಂದಿ ಸ್ಪರ್ಧಿಸುತ್ತಿದ್ದಾರೆ. ದ.ಕ. ಜಿಲ್ಲಾ ಒಂದು ಮಹಿಳಾ ಸ್ಥಾನಕ್ಕೆ 4 ಮಂದಿ ಹಾಗೂ ಉಡುಪಿ ಜಿಲ್ಲಾ ಒಂದು ಮಹಿಳಾ ಸ್ಥಾನಕ್ಕೆ 3 ಮಂದಿ ಸ್ಪರ್ಧಿಸುತ್ತಿದ್ದಾರೆ.
ತಾಲೂಕಿನಿಂದ ಇಬ್ಬರು ಅಭ್ಯರ್ಥಿಗಳು
ಪುತ್ತೂರು ವಿಭಾಗದಿಂದ ಕೆ. ಚಂದ್ರಶೇಖರ ರಾವ್, ಜಗನ್ನಾಥ ಶೆಟ್ಟಿ, ಎಸ್ ಬಿ. ಜಯರಾಮ ರೈ, ಹೆಚ್. ಪ್ರಭಾಕರ, ಭರತ್ ಎನ್.ಪಿ., ರಮೇಶ್ ಪೂಜಾರಿ, ರಾಮಕೃಷ್ಣ ಡಿ. ಸ್ಪರ್ಧಿಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನಿಂದ ಆರಂಬೋಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಹೆಚ್. ಪ್ರಭಾಕರ್ ಹಾಗೂ ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪಿ. ರಮೇಶ್ ಪೂಜಾರಿ ಮಧ್ಯೆ ಹಣಾಹಣಿ ನಡೆಯಲಿದೆ. ಅಂತಿಮ ಕಣದಲ್ಲಿರುವ ಹೆಚ್. ಪ್ರಭಾಕರ್ ರವರಿಗೆ ಸ್ಟೂಲ್ ಮತದಾನದ ಚಿಹ್ನೆಯಾಗಿದೆ. ಪಿ. ರಮೇಶ್ ಪೂಜಾರಿ ಅವರಿಗೆ ಆಟೋರಿಕ್ಷಾ ಚಿಹ್ನೆಯಾಗಿದೆ.
ಕುಂದಾಪುರ ವಿಭಾಗ: ಅಶೋಕ್ ಕುಮಾರ್ ಶೆಟ್ಟಿ, ಅಶೋಕ್ ರಾವ್, ಉದಯ ಎಸ್. ಕೋಟ್ಯಾನ್, ಉಲ್ಲಾಸ್ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಕಾಪು ದಿವಾಕರ ಶೆಟ್ಟಿ, ದಿನಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಎಂ.ಪ್ರಕಾಶ್ ಶೆಟ್ಟಿ, ಎಸ್. ಪ್ರಕಾಶ್ ಚಂದ್ರ ಶೆಟ್ಟಿ, ಟಿ.ವಿ.ಪ್ರಾಣೇಶ ಯಡಿಯಾಳ, ಭೋಜ ಪೂಜಾರಿ, ಕೆ. ಮೋಹನದಾಸ ಆಡ್ಯಂತಾಯ, ಎನ್. ಮಂಜಯ್ಯ ಶೆಟ್ಟಿ, ರವಿರಾಜ ಎನ್. ಶೆಟ್ಟಿ, ರವಿರಾಜ ಹೆಗ್ಡೆ, ಕೆ. ಶಿವಮೂರ್ತಿ, ಸರ್ವೋತ್ತಮ ಶೆಟ್ಟಿ, ಸುಧಾಕರ ಶೆಟ್ಟಿ, ಸುಬ್ಬಣ್ಣ ಶೆಟ್ಟಿ, ಸುರೇಶ ಶೆಟ್ಟಿ ಸ್ಪರ್ಧೆಯಲ್ಲಿದ್ದಾರೆ.
ದ.ಕ. ಜಿಲ್ಲಾ ಮಹಿಳಾ ಸ್ಥಾನ: ಅನುರಾ ವಾಯೋಲಾ ಡಿಸೋಜ, ಉಪಾ ಅಂಚನ್, ಶರ್ಮಿಳಾ ಕೆ., ಸವಿತಾ ಎನ್.ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಉಡುಪಿ ಜಿಲ್ಲಾ ಮಹಿಳಾ ಸ್ಥಾನ: ಮಮತಾ ಆರ್. ಶೆಟ್ಟಿ, ಕಾಂತಾ ಎಸ್.ಭಟ್. ಸ್ಮಿತಾ.ಆರ್.ಶೆಟ್ಟಿ ಕಣದಲ್ಲಿದ್ದಾರೆ. ಮಂಗಳೂರು ವಿಭಾಗ- ನಂದರಾಮ್ ರೈ, ಸುಚರಿತ ಶೆಟ್ಟಿ, ಸುದರ್ಶನ ಜೈನ್, ಬಿ. ಸುಧಾಕರ ರೈ, ಸುದೀಪ್ ಆರ್.ಅಮೀನ್, ಸುಭದ್ರಾ ಎನ್. ರಾವ್ ಕಣದಲ್ಲಿದ್ದಾರೆ.