ಕೊಕ್ಕಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಾವೀರ ಕಾಲೋನಿ ಸಂಪರ್ಕ ರಸ್ತೆಯಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಅಳವಡಿಸಲಾದ ಬೀದಿ ದೀಪ ವನ್ನು ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಎಸ್,ಸಿ.ಡಿ.ಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಹಾಗೂ ಸತ್ಯ ಸಾರಾಮನಿ ದೈವಸ್ಥಾನ ಅಧ್ಯಕ್ಷರು ಗಿರೀಶ್ ಮಹಾವೀರ ಕಾಲೋನಿ ಯವರು ಗುಂಡಿ ಒತ್ತುವ ಮೂಲಕ ಉದ್ಘಾಟನೆ ಮಾಡಿದರು.

ಉಪ್ಪಾರಪಳಿಕೆಯಿಂದ ಗೊಳಿತೊಟ್ಟು ರಸ್ತೆಯಲ್ಲಿ ಅಳವಡಿಸಲಾದ ಬೀದಿ ದೀಪವನ್ನು ಕೊಕ್ಕಡ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ್ ಗೌಡ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ನಿಕಪೂರ್ವಧ್ಯಕ್ಷ ಯೋಗೀಶ್ ಅಲಂಬಿಲ, ಪಂ. ಸದಸ್ಯ ಜಗದೀಶ್ ಕೆಂಪಕೋಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಕಾರ್ಯದರ್ಶಿ ಶ್ರೀಮತಿ ಭಾರತೀ, ಫ್ಯಾಕ್ಸ್ ಬ್ಯಾಂಕ್ ನಿರ್ದೇಶಕರು ಶ್ರೀನಾಥ್ ಬಡೆಕಾಯಿಲ್, ಕಾಮಗಾರಿ ನಡೆಸಿದ ಪುರುಷೋತ್ತಮ್ ಕೊಕ್ಕಡ, ಮೆಸ್ಕಾಂ ಇಲಾಖೆಯಿಂದ ಸೀನಿಯರ್ ಪವರ್ ಮ್ಯಾನ್ ರವಿ, ಪವರ್ ಮ್ಯಾನ್ 237ನೇ ಬಿಜೆಪಿ ಬೂತು ಸಮಿತಿ ಅಧ್ಯಕ್ಷ ಶಶಿ ತಿಪ್ಪಮಾಜಲ್, ಕಾರ್ಯದರ್ಶಿ ಶ್ರೀಧರ್ ಬಲಕ್ಕ ಉಪಸ್ಥಿತರಿದ್ದರು..