ಬೆಳ್ತಂಗಡಿ: ಮಾರ್ಚ್ 2025 ರಂದು ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 587 ಅಂಕಗಳನ್ನು ಗಳಿಸಿದ ರಿತೀಷ ನಂತರದಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಮೂರು ಅಂಕಗಳ ಸೇರ್ಪಡೆಯೊಂದಿಗೆ ರಾಜ್ಯಕ್ಕೆ ಹತ್ತನೇ ಸ್ಥಾನವನ್ನು ಗಳಿಸಿರುತ್ತಾರೆ. ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕ ವೃಂದ ಹೆಮ್ಮೆಪಡುವಂತಾಗಿದೆ ಎಂದು ಪ್ರಾಂಶುಪಾಲ ಯದುಪತಿ ಗೌಡ ತಿಳಿಸಿದ್ದಾರೆ.
ವೇಣೂರಿನ ನಿವಾಸಿಯಾದ ರಿತೀಷ ತಂದೆ ಸೇಸಪ್ಪ, ತಾಯಿ ಸುಜಾತ ದಂಪತಿಯ ಪುತ್ರಿ.