ನ್ಯಾಯತಪು೯: ಗುರುವಾಯನಕೆರೆ -ಉಪ್ಪಿನಂಗಡಿ ರಾಜ್ಯ ಹೆದ್ದಾರಿ ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ಸಮೀಪದ ಕಡಿದಾದ ತಿರುವಿನಲ್ಲಿ ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಘಟನೆ ಎ.26 ರಂದು ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದೆ.

ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿಗೆ ಇಬ್ಬರು ಮಹಿಳೆಯರು, ಮೂವರು ಮಕ್ಕಳು,ಓರ್ವ ಚಾಲಕ ಕಾರಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಉಪ್ಪಿನಂಗಡಿ ಸಮೀಪದ ಕರಾಯ ಪೆಟ್ರೋಲಿಯಂ ಪಂಪ್ ಗೆ ಡೀಸಲ್ ತುಂಬಿಸಿ ಗುರುವಾಯನಕೆರೆ ಕಡೆಗೆ ಪ್ರಯಾಣ ಬೆಳೆಸುವ ಸಮಯದಲ್ಲಿ ಭಾರೀ ಗುಡುಗು,ಗಾಳಿ, ಮಳೆಗೆ ಎದುರಿನ ಕಾರಿ ಡಿಕ್ಕಿ ಯಾಗಿದೆ.ಪ್ರಯಾಣಿಕರಿಗೆ ಮತ್ತು ಚಾಲಕರಿಗ ಯಾವುದೇ ರೀತಿಯ ತೊಂದರೆಗಳು ಆಗಿರುವುದಿಲ್ಲ. ನಾಳ ಸಮೀಪದ ಅಡಿಕೆ ಸಾಗಾಟದ ಪಿಕಪ್ ಮತ್ತು ಜಾರಿಗೆಬೈಲು ಸಮೀಪದಲ್ಲಿ ನಡೆದ ಕಾರು ಮಾಲೀಕರು ಹತ್ತಿರದ ಸಂಬಂಧಗಳೆಂದು ಕಾರು ಚಾಲಕ ತಿಳಿಸಿದರು.