ಬೆಳ್ತಂಗಡಿ: ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗೋಪಾಲಕೃಷ್ಣ ದೇವರ ನೂತನ ಬಿಂಬ ಪ್ರತಿಷ್ಠೆ ಪ್ರಾಣ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು 4 ದಿನದ ಧಾರ್ಮಿಕ ಸಭಾ ಕಾರ್ಯಕ್ರಮ ಎ.28 ರಂದು ನಡೆಯಿತು.ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ನಟೇಶ್ ಪೂಜಾರಿ,ಉಪ್ಪಿನಂಗಡಿ ದಂತ ವೈದ್ಯ ರಾಜಾರಾಮ ಕೆ.ಬಿ., ಅಪಾರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಇಳಂತಿಲ, ಬಾರ್ಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಉಷಾ ಶರತ್, ಕಲ್ಲೇರಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಭಾಜಪ ರಾಜ್ಯ ಕಾರ್ಯಕಾರಣಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ತುಕಾರಾಮ ನಾಯಕ್ ನಾಗರಕೋಡಿ, ಫ್ರೆಂಡ್ಸ್ ತೆಕ್ಕಾರು ಅಧ್ಯಕ್ಷ ತುಲಸೀಧರ ವಿ. ಕೋಟ್ಯಾನ್ ಬೇನಪ್ಪು, ತೆಕ್ಕಾರು ಪ್ಯಾಕ್ಸ್ ಮಾಜಿ ನಿರ್ದೇಶಕ ಜನಾರ್ದನ ಮರಮ ಗುತ್ತು ಹಾಗೂ ಪ್ರಗತಿಪರ ಕೃಷಿಕ ಜಗದೀಶ್ ಗೌಡ ಉಪಸ್ಥಿತರಿದ್ದರು. ಅಕ್ಷತಾ ನಾಯಕ್ ಮರಮ ಸ್ವಾಗತಿಸಿ, ದೇವಿಪ್ರಸಾದ್ ಬೇನಪ್ಪು ನಿರೂಪಿಸಿದರು.