41.3 C
ಪುತ್ತೂರು, ಬೆಳ್ತಂಗಡಿ
April 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ: ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು

ಬೆಳ್ತಂಗಡಿ : ಲಾಯಿಲ ಟಿ.ಬಿ ಕ್ರಾಸ್ ಬಳಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳತನ ಮಾಡಿದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಟಿ.ಬಿ ಕ್ರಾಸ್ ಹಳೆಪೇಟೆ ನಿವಾಸಿ ವರದರಾಜ ಹೆಗ್ಡೆ ಎಂಬವರ ಮನೆಯ ಅಂಗಳದಿಂದಲೇ ಬೈಕ್ ಕಳ್ಳತನವಾಗಿದೆ. ವರದರಾಜ ಹೆಗ್ಡೆ ಅವರು ಸೇಲ್ಸ್ ಮ್ಯಾ‌ನ್ ಕೆಲಸ ಮಾಡಿಕೊಂಡಿದ್ದು ಏ.25ರಂದು ಕೆಲಸ ಮುಗಿಸಿ ಬಂದು ರಾತ್ರಿಯ ವೇಳೆ ಮನೆಯ ಹೊರಗೆ ಶೆಡ್ ನಲ್ಲಿ ತನ್ನ ಕೆ.ಎ 70 E 1651ನಂಬರಿನ ಸುಜುಕಿ ಕಂಪೆನಿಯ ಮೋಟಾರ್ ಸೈಕಲ್ ಅನ್ನು ನಿಲ್ಲಿಸಿದ್ದರು. ಏ.26ರಂದು ಬೆಳಗ್ಗೆ ಎದ್ದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ನೆರಕರೆಯಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗದ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರಿಗೆ ಏ.26 ರಂದು ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ತಣ್ಣೀರುಪಂತ: 7ನೇ ತರಗತಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಸಹೋದರರಿಬ್ಬರು ಒಂದೇ ದಿನ ನಿಧನ

Suddi Udaya

ಬೆಳ್ತಂಗಡಿ:ರಬ್ಬರ್ ಕೃಷಿ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ

Suddi Udaya

ಪಂಜ: ವಲಯ ಅರಣ್ಯಾಧಿಕಾರಿಯಾಗಿ ಬೆಳ್ತಂಗಡಿಯ ಶ್ರೀಮತಿ ಸಂಧ್ಯಾ ಅಧಿಕಾರ ಸ್ವೀಕಾರ

Suddi Udaya

ಕರಿಕಲ್ ಶಾಖಾ ಮಠದಲ್ಲಿ ಜು.21ರಿಂದ ಆ.30ರವರೆಗೆ ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರ ಚಾತುರ್ಮಾಸ್ಯ ವ್ರತ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ವಾರ್ಷಿಕ ಮಹಾಸಭೆ

Suddi Udaya
error: Content is protected !!