ಕೊಕ್ಕಡ: ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ ಉಪ್ಪಾರಪಳಿಕೆ, ಶ್ರದ್ಧಾ ಗೆಳೆಯರ ಬಳಗ ಉಪ್ಪಾರಪಳಿಕೆ ಹಾಗೂ ಶ್ರೀ ಕೃಷ್ಣ ಭಜನಾ ಮಂದಿರ ಪ್ರಾರಂಭೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಉಪ್ಪಾರಪಳಿಕೆಯಲ್ಲಿ ನವೀಕೃತ ಶ್ರೀ ಕೃಷ್ಣ ಭಜನಾ ಮಂದಿರದ ಪ್ರಾರಂಭೋತ್ಸವ ಕಾರ್ಯಕ್ರಮವು ಎ. 30ರಂದು ನಡೆಯಿತು.

ಬೆಳಿಗ್ಗೆ ಗಣಹೋಮ, ನವೀಕೃತ ಭಜನಾ ಮಂದಿರದ ಪ್ರಾರಂಭೋತ್ಸವ, ಬಳಿಕ ಸಾಮೂಹಿಕ ಹನುಮಾನ್ ಚಾಲಿಸ್ ಪಠಣ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.


ಶ್ರೀ ಕೃಷ್ಣ ಭಜನಾ ಮಂದಿರದ ಲೋಕಾರ್ಪಣೆ ಪ್ರಯುಕ್ತ ಪ್ರಕೃತಿ ಲೀಫ್ ಕಪ್ ಇಂಡಸ್ಟ್ರೀಸ್ ಉಪ್ಪಾರಪಳಿಕೆ ಇವರಿಂದ ಅಡಿಕೆ ಹಾಳೆತಟ್ಟೆಯಿಂದಲೇ ನಿರ್ಮಿಸಿದ ದ್ವಾರ
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಯೋಗೀಶ್ ಆಲಂಬಿಲ, ಶ್ರೀ ಕೃಷ್ಣ ಭಜನಾ ಮಂದಿರ ಪ್ರಾರಂಭೋತ್ಸವ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಬಳಕ್ಕ, ಕಾರ್ಯದರ್ಶಿ ಶಿವಾನಂದ ಸಂಕೇಶ, ಶ್ರದ್ಧಾ ಗೆಳೆಯರ ಬಳಗದ ಅಧ್ಯಕ್ಷ ಶ್ರೀಧರ್ ದೇರಾಜೆ, ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ ಕಾರ್ಯದರ್ಶಿ ಶ್ರೀಧರ್ ಬಳಕ್ಕ ಹಾಗೂ ಸಮಿತಿಗಳ ಸಂಚಾಲಕರು, ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

ಸಂಜೆ ಗಂಟೆ 4 ರಿಂದ ಆಹ್ವಾನಿತ ಭಜನಾ ತಂಡಗಳಿAದ ಕುಣಿತ ಭಜನೋತ್ಸವ, 7 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 9.30 ರಿಂದ ಚಿದಾನಂದ ಅದ್ಯಪಾಡಿ ನಿರ್ದೇಶನದ ವಿಧಾತ್ರೀ ಕಲಾವಿದೆರ್ ಕೈಕಂಬ ಕುಡ್ಲ (ರಿ) ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ಸಲಹೆ ಸಹಕಾರದೊಂದಿಗೆ ವಿಭಿನ್ನ ಶೈಲಿಯಲ್ಲಿ ‘ದೈವರಾಜೆ ಶ್ರೀ ಬಬ್ಬು ಸ್ವಾಮಿ’ ಭಕ್ತಿಪ್ರದಾನ ತುಳು ನಾಟಕ ನಡೆಯಲಿದೆ.