39.4 C
ಪುತ್ತೂರು, ಬೆಳ್ತಂಗಡಿ
May 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಜೆಸಿಐ ಬೆಳ್ತಂಗಡಿ ವತಿಯಿಂದ ಜಾಯಿನ್ ಜೆಸಿಐ ಅಭಿಯಾನದಲ್ಲಿ ಜೇಸಿಯೇತರ ಸದಸ್ಯರಿಗಾಗಿ ಒರಿಯಂಟೇಷನ್ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ : ಜೇಸಿ ಭವನ ಬೆಳ್ತಂಗಡಿ ಇಲ್ಲಿ ಜೇಸಿಯೇತರರಿಗೆ ಒರಿಯಂಟೇಷನ್ ತರಬೇತಿ ಹಮ್ಮಿಕೊಳ್ಳಲಾಯಿತು. ಜೆಸಿಐ ಭಾರತದ ವಲಯ 15 ರ ಪೂರ್ವ ವಲಯಾಧ್ಯಕ್ಷ ಜೆಸಿಐ ಸೆನೆಟರ್ ರೋಯನ್ ಉದಯ ಕ್ರಾಸ್ತಾ ಇವರು ಜೆಸಿಐ ನಲ್ಲಿನ ವಿಫುಲ ಅವಕಾಶಗಳು ಹಾಗೂ ರಾಷ್ಟ್ರೀಯ ಅಂತರಾಷ್ಟ್ರೀಯ ಮಾಹಿತಿಯನ್ನೊಳಗೊಂಡ ತರಬೇತಿ ನಡೆಸಿಕೊಟ್ಟರು. ತರಬೇತಿ ಪಡೆದ ಜೇಸಿಯೇತರರು ಜೆಸಿಐ ಬೆಳ್ತಂಗಡಿ ಸದಸ್ಯರಾಗಿ ಸೇರ್ಪಡೆಯಾದರು ತರಬೇತುದಾರರು ನೂತನ ಸದಸ್ಯರಿಗೆ ಪ್ರಮಾಣವಚನ ಭೋದಿಸಿದರು.

ಜೆಸಿಐ ಬೆಳ್ತಂಗಡಿ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಸಭಾಧ್ಯಕ್ಷತೆ ವಹಿಸಿ ಸರ್ವರಿಗೂ ಸ್ವಾಗತ ಕೋರಿದರು. ವಲಯದ ಉಪಾಧ್ಯಕ್ಷ ಜೆ.ಎಫ್.ಎಮ್ ರಂಜಿತ್ ಎಚ್‌ಡಿ ರವರು ನೂತನ ಜೇಸಿಗಳಿಗೆ ಶುಭಾಶಯ ಸಲ್ಲಿಸಿದರು. ಮಹಿಳಾ ಜೇಸಿ ಸಂಯೋಜಕಿ ಜೇಸಿ ಚಿತ್ರಪ್ರಭ ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಮೊದ್ ಕೆ ಚಿಬಿದ್ರೆ ಧನ್ಯವಾದವಿತ್ತರು.

Related posts

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ದಿನೇಶ್ ಹೊಳ್ಳರವರಿಂದ ಬ್ಯಾಗ್, ಛತ್ರಿ, ಲೇಖನಿ ಸಾಮಾಗ್ರಿ ವಿತರಣೆ

Suddi Udaya

ಬೆಂಗಳೂರಿನ ಸಪ್ನ ಪುಸ್ತಕ ಮಳಿಗೆಯಲ್ಲಿ ಪದ್ಮಲತಾ ಮೋಹನ್ ನಿಡ್ಲೆ ಅವರ ಕಾದಂಬರಿ ‘ಮೃತ್ಯು ಚುಂಬನ’ ಕೃತಿ ಬಿಡುಗಡೆ

Suddi Udaya

ಗಮಕ ಜಿಲ್ಲಾಧ್ಯಕ್ಷರಾಗಿ ಮೋಹನ ಕಲ್ಲೂರಾಯರ ನೇಮಕ

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಂಭ್ರಮದ ಸ್ವಾತಂತ್ರ್ಯ

Suddi Udaya

ಎಲ್‌.ಪಿ.ಜಿ ಸಿಲಿಂಡರ್‌ ದರ 100ರೂ ಕಡಿತ

Suddi Udaya

ವಿಷು ಕಣಿ ಆಚರಣಾ ಸಮಿತಿಯಿಂದ ಕೇರಳ ಸಂಪ್ರಾದಾಯಿಕ ವಿಷು ಕಣಿ ಆಚರಣೆ: ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಮನೋರಂಜನಾ ಕಾರ್ಯಕ್ರಮ, 30 ಬಗೆಯ ಉಟೋಪಚಾರ

Suddi Udaya
error: Content is protected !!