ಬೆಳ್ತಂಗಡಿ: ಎಪ್ರಿಲ್ 26 ರಂದು ಆವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಪುತ್ತೂರು ವಿಭಾಗದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಿರ್ದೇಶಕನಾಗಿ ಆಯ್ಕೆಯಾಗಿರುತ್ತೇನೆಂದು ನಿರ್ದೇಶಕ ಪ್ರಭಾಕರ್ ಎಚ್ ಸ್ಪಷ್ಟನೆ ನೀಡಿದ್ದಾರೆ.
ಪ್ರತಿಷ್ಠಿತ ಸಹಕಾರ ಸಂಸ್ಥೆಗೆ ನನ್ನನ್ನು ಆಯ್ಕೆ ಮಾಡಲು ಸಹಕರಿಸಿದ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬಿಜೆಪಿ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು ಪೂರಕವಾಗಿ ಸಹಕರಿಸಿದ ಕ್ಷೇತ್ರದ ಪ್ರಮುಖರಿಗೆ ಕ್ಷೇತ್ರದ ವ್ಯಾಪ್ತಿಯ ಮಹಾಶಕ್ತಿಕೇಂದ್ರ, ಸಹಕಾರ ಭಾರತೀಯ ಪದಾಧಿಕಾರಿಗಳಿಗೆ ಮತದಾನ ಮಾಡಿ ಆಶೀರ್ವದಿಸಿದ ಹಾಲು ಉತ್ಪಾದಕ ಸಹಕಾರಿ ಸಂಘದ ಪ್ರತಿನಿಧಿಗಳಿಗೆ ಮನದಾಳದ ಕೃತಜ್ಞತೆ ತಿಳಿಸಿದ ಪ್ರಭಾಕರ್ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಗೆ ತೆರೆ ಎಳೆಯುವ ಸದುದ್ದೇಶದಿಂದ ತಾನು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದಾಗಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಯಪಡಿಸಿದ್ದಾರೆ.