23.7 C
ಪುತ್ತೂರು, ಬೆಳ್ತಂಗಡಿ
May 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಧ್ವಜಸ್ತಂಭದ ವೃಕ್ಷ ಮುಹೂರ್ತ

ಮಚ್ಚಿನ: ಇತಿಹಾಸ ಪ್ರಸಿದ್ದ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವು ನಡೆಯುತ್ತಿದ್ದು ಇದರ ಧ್ವಜಸ್ತಂಭದ ವೃಕ್ಷ ಮುಹೂರ್ತವು ನೂತನ ಧ್ವಜಸ್ತಂಭದ ನಿರ್ಮಾಣದ ಕಾಮಗಾರಿಯ ಪೂರ್ವಭಾವಿಯಾಗಿ ಮೇ. 2ರಂದು ಬ್ರಹ್ಮಶ್ರೀ ದೇರಬೈಲು ಡಾ. ಶಿವಪ್ರಸಾದ ತಂತ್ರಿಗಳ ನೇತೃತ್ವದಲ್ಲಿ ತಣ್ಣೀರುಪಂತ ಗ್ರಾಮದ ಅಳಕ್ಕೆಯ, “ಅಳಕ್ಕೆ ಕುಟುಂಬಸ್ಥರು ಮತ್ತು ಬೈಲಿನ ಸಮಸ್ತರು” ದಾನವಾಗಿ ನೀಡುವ ಮರದ ವೃಕ್ಷ ಮುಹೂರ್ತ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಬಳ್ಳಮಂಜ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಡಾ. ಎಂ ಹರ್ಷ ಸಂಪಿಗೆತ್ತಾಯ, ಹಿರಿಯ ವಕೀಲರು ಬದರಿನಾಥ್ ಸಂಪಿಗೆತ್ತಾಯ, ಶ್ಯಾಮ್ ಪ್ರಸಾದ್, ಸತೀಶ್ ಕಾರಂದೂರು, ಪ್ರಮೋದ್ ಕುಮಾರ್, ನಾರಾಯಣ ಪೂಜಾರಿ, ದೇವಸ್ಥಾನದ ವ್ಯವಸ್ಥಾಪಕ ಬಾಲಣ್ಣ, ಗ್ರಾಮಸ್ಥರು, ಭಕ್ತಾದಿಗಳು ಮೊದಲಾದ ಗಣ್ಯರು ಭಾಗಿಯಾಗಿದ್ದರು.

Related posts

ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ಬಂಗೇರರ ಹೆಸರು,ಮುಖ್ಯಮಂತ್ರಿಗಳಿಂದ ಪೂರ್ಣ ಸಹಕಾರದ ಭರವಸೆ: ಕೃತಜ್ಞತೆ ಅರ್ಪಿಸಿದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ

Suddi Udaya

ಮಂಗಳೂರು ಭವಿಷ್ಯ ನಿಧಿ ಕಚೇರಿಗೆ ಪಿ.ಎಫ್. ಬೋರ್ಡನ ಕೇಂದ್ರೀಯ ಸದಸ್ಯ ಹಿರಣ್ಮಯಿ ಪಾಂಡ್ಯ ಭೇಟಿ

Suddi Udaya

ಕುತ್ಲೂರು: ಜೇನು ಕೃಷಿ ತರಬೇತಿ ಮತ್ತು ತೋಟಗಾರಿಕಾ ಬೆಳೆಗಳು ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ಧಜಲ ಅಭಿಯಾನ: ಡಾ| ಡಿ ವೀರೇಂದ್ರ ಹೆಗ್ಗಡೆಯವರಿಂದ ಕರಪತ್ರ ಬಿಡುಗಡೆ

Suddi Udaya

ಭಾರಿ ಗಾಳಿ ಮಳೆ: ಪಿಲ್ಯ ಗೋಳಿಕಟ್ಟೆ ಬಳಿ ರಸ್ತೆಗೆ ಬಿದ್ದ ಮರ: ವಿದ್ಯುತ್ ಕಂಬಕ್ಕೆ ಹಾನಿ

Suddi Udaya

ಜನಾರ್ಶೀವಾದದಿಂದ ಎರಡನೇ ಬಾರಿ ಶಾಸಕರಾಗಿ ಹರೀಶ್ ಪೂಂಜ ಆಯ್ಕೆ: ಕುತ್ಲೂರಿನಲ್ಲಿ ಕಾರ್ಯಕರ್ತರಿಂದ ಅದ್ಧೂರಿ ವಿಜಯೋತ್ಸವ

Suddi Udaya
error: Content is protected !!