ಅಳದಂಗಡಿ: ಹಾನಿಂಜ ಸಾಲುಕಾಯೇರು ಶ್ರೀ ಮಹಮ್ಮಾಯಿ ಅಮ್ಮನವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮೇ. 2 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಮಾಜಿ ಶಾಸಕ ಕೆ.ಹರೀಶ್ ಕುಮಾರ್ ದೀಪ ಪ್ರಜ್ವಲಿಸಿ ಮಾತನಾಡಿ ಭಯ ಭಕ್ತಿಯ ದೇವರ ಸೇವೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ಕೇಂದ್ರ ದೇವಸ್ಥಾನ ಎಂದರು.

ಚಪ್ಪರ ಮುಹೂರ್ತವನ್ನು ಇರ್ದೆ ಪುತ್ತೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಗೋಪಾಲ ಕ್ಷೇತ್ರದ ಆಡಳಿತ ಮೊಕ್ತೇಸರ ವಿಠಲ್ ರೈ ಬಾಲ್ಯೋಟ್ಟು ಗುತ್ತು ನೇರವೇರಿಸಿ ಶುಭ ಕೋರಿದರು.
ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಪ್ರಗತಿಪರ ಕೃಷಿಕರಾದ ಸಂತೋಷ್ ಕುಮಾರ್ ಕಾಪಿನಡ್ಕ ಬಿಡುಗಡೆಗೊಳಿಸಿ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸಿದ್ದ ವೈದ್ಯ ಡಾ.ಶಶಿಧರ ಡೋಂಗ್ರೆ ವಹಿಸಿ ಶುಭ ಕೋರಿದರು.

ಡಾ.ಹರೀಶ್ ಪ್ರಸಾದ್ ಸುವರ್ಣ ಕಲಶ ಕೂಪನ್ ಬಿಡುಗಡೆಗೊಳಿಸಿ ಶುಭ ಕೋರಿದರು.ವೇದಿಕೆಯಲ್ಲಿ ದೇವಸ್ಥಾನದ ವ್ಯವಸ್ಥಾಪಕ ಸೋಮನಾಥ ಹೆಗ್ಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಿವಪ್ರಸಾದ್ ಅಜಿಲ,ಯುವ ಉದ್ಯಮಿ ಅಭಿನಂದನ್ ಹರೀಶ್ ಕುಮಾರ್,ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ಮಾಜಿ ನಿರ್ದೇಶಕ ಪ್ರಶಾಂತ್ ಶೆಟ್ಟಿ ಬೊಳ್ಳಿಮಾರ್,ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ದೇವಾಡಿಗ ಹಾನಿಂಜ,ಕೋಶಾಧಿಕಾರಿ ಶಶಿಕಾಂತ್ ನಾಯಕ್,ಉಪಾಧ್ಯಕ್ಷ ಜಗದೀಶ್ ರೈ ಪಾಂಡ್ಯೋಟ್ಟು,ಧರ್ಣಪ್ಪ ಪೂಜಾರಿ ದೊರಿಂಜ,ಆನಂದ ಪೂಜಾರಿ ನೀರಳ್ಕೆ,ಪ್ರಮುಖರಾದ ಜಗದೀಶ್ ಪೂಜಾರಿ ಪೆರಾಜೆ,ಸುಕೇಶ್ ಹಾನಿಂಜ,ಉಮೇಶ್ ಸುವರ್ಣ,ಗಣೇಶ್ ದೇವಾಡಿಗ ಸಂಭ್ರಮ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವೈದಿಕ ವಿಧಿ ವಿಧಾನಗಳನ್ನು ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನ ಪ್ರಧಾನ ಆರ್ಚಕ ಪ್ರಕಾಶ್ ಭಟ್ ನೇರವೇರಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು ಸ್ವಾಗತಿಸಿ,ಪ್ರಧಾನ ಸಂಚಾಲಕ ಸದಾನಂದ ಪೂಜಾರಿ ಉಂಗಿಲಬೈಲು ವಂದಿಸಿದರು.ಜೊತೆ ಕಾರ್ಯದರ್ಶಿ ಸಂದೀಪ್ ನೀರಲ್ಕೆ ನಿರೂಪಿಸಿದರು.