25.7 C
ಪುತ್ತೂರು, ಬೆಳ್ತಂಗಡಿ
March 7, 2026
ಕ್ರೀಡಾ ಸುದ್ದಿಚಿತ್ರ ವರದಿವರದಿ

44ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -2025ಶಿಕ್ಷಕಿ ಸೌಮ್ಯಾ ಕೆ. ಬಂಗಾಡಿ ಅವರಿಗೆ ಹಲವು ಬಹುಮಾನಗಳು

ಬೆಳ್ತಂಗಡಿ; ಏ.21ರಿಂದ 23ರವರೆಗೆ ಮೈಸೂರು ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಜರುಗಿದ 44ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2025 ಇದರಲ್ಲಿ ಸರಕಾರಿ ಪ್ರೌಢ ಶಾಲೆ ಕಾಶಿಪಟ್ಣ ಸಮಾಜ ವಿಜ್ಞಾನ ಶಿಕ್ಷಕಿ ಸೌಮ್ಯ. ಕೆ ಅವರು ಭಾಗವಹಿಸಿ ಹಲವು ವಿಭಾಗಗಳಲ್ಲಿ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.

ಪಂದ್ಯಾಕೂಟದ 40 ರಿಂದ 45 ವರ್ಷ ವಯೋಮಾನದವರ ಸ್ಪರ್ಧೆಯ 200ಮೀ ಹರ್ಡಲ್ಸ್ ಪ್ರಥಮ, ಉದ್ದಜಿಗಿತ ಪ್ರಥಮ, 400 ಮೀ ದ್ವೀತಿಯ, 200 ಮೀ ದ್ವೀತಿಯ, 4*400 ರಿಲೇ ಪ್ರಥಮ, 4*100 ರಿಲೇ ಪ್ರಥಮ, 4*100 ಮಿಕ್ಸೆಡ್ ರಿಲೇ ತೃತೀಯ ಸ್ಥಾನ ಪಡೆಯುವ ಮೂಲಕ ಅಪೂರ್ವ ಕ್ರೀಡಾ ಸಾಧನೆ ಮೆರೆದಿದ್ದಾರೆ.

ಇವರ ಈ ಸ್ಪೂರ್ತಿದಾಯಕ‌ ಕ್ರೀಡಾ ಭಾಗವಹಿಸುವಿಕೆ ಕ್ರೀಡಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇವರು ಬಂಗಾಡಿ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್ ಲಕ್ಷ್ಮಣ ಗೌಡ ಅವರ ಪುತ್ರಿ.

Related posts

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.1.85ಕೋಟಿ ನಿವ್ವಳ ಲಾಭ, ಶೇ.14 ಡಿವಿಡೆಂಟ್ ಘೋಷಣೆ

Suddi Udaya

ಬೆಳ್ತಂಗಡಿಯ ಹಿರಿಯ ನಾಗರಿಕರಿಂದ ಉತ್ತರ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಭೇಟಿ

Suddi Udaya

ಇಂದಬೆಟ್ಟು ಸ.ಹಿ. ಪ್ರಾ. ಶಾಲೆಯ ಎಸ್‌ಡಿಎಂಸಿ ಸಮಿತಿ ರಚನೆ

Suddi Udaya

ಜ.25 , 26 : ಬೆಳ್ತಂಗಡಿ ಟೀಂ ಅಭಯಹಸ್ತ ಆಶ್ರಯದಲ್ಲಿ ಅಷ್ಟಮ ವರ್ಷದ ಅದ್ಧೂರಿ ಕಾರ್ಯಕ್ರಮ

Suddi Udaya

ಹೈಕೋರ್ಟ್ ಇ.ಡಿ ಪರ ವಕೀಲರಾಗಿ ಕರುಣಾಕರ ಗೌಡ ಪಿ. ಕೊಯ್ಯೂರು ಆಯ್ಕೆ

Suddi Udaya

ಡಿ.31: ಬಳಂಜ ಬೋಂಟ್ರೊಟ್ಟುಗುತ್ತು ಧರ್ಮದೈವಗಳ ಮೂಲಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ವರ್ಧಂತಿ ನೇಮೋತ್ಸವ ಹಾಗೂ ಕೇತುಲ್ಲಾಯ ದೈವಕ್ಕೆ ಪಂಚಪರ್ವ ಸೇವೆ

Suddi Udaya
error: Content is protected !!