March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆಯ ಸಿದ್ಧವನದಲ್ಲಿ ಶಂಕರ ಜಯಂತಿ

ಉಜಿರೆ: ‘ ಆಚಾರ್ಯ ತ್ರಯರಲ್ಲಿ ಶಂಕರರದ್ದು ದೊಡ್ಡ ಹೆಸರು. ಭಾರತದ ಇಕ್ಕೆಲೆಗಳಲ್ಲಿ ಸಂಚರಿಸಿ ಧರ್ಮದ ಪುನರುತ್ಥಾನ ಮಾಡಿದ ಮಹಾನುಭಾವರು. ಪ್ರಸ್ಥಾನತ್ರಯ ಭಾಷ್ಯ ರಚನೆಯೇ ಮುಂತಾದ ಅನೇಕ ಕೃತಿಗಳನ್ನು ಲೋಕಕ್ಕೆ ನೀಡಿದ ಮಹಾನ್ ದಾರ್ಶನಿಕರು. ಬಾಲ್ಯದಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ , ವೇದಾದಿಗಳನ್ನು , ಶಾಸ್ತ್ರಗಳ ಜ್ಞಾನದೀವಿಗೆ ಪಡೆದು ಲೋಕಕ್ಕೆ ಹೊಸ ಬೆಳಕನ್ನು ನೀಡಿದವರು ಶಂಕರರು ‘ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಹೇಳಿದರು.

ಇವರು ಉಜಿರೆಯ ಸಿದ್ದವನ ಗುರುಕುಲದಲ್ಲಿ ನಡೆದ ಶಂಕರ ಜಯಂತಿ ಕಾರ್ಯಕ್ರಮದ ಅಭ್ಯಾಗತರಾಗಿ ಮಾತನಾಡಿದರು.

ಗುರುಕುಲದ ಪ್ರಧಾನ ಪಾಲಕರಾದ ಕೇಶವ ನಾಯ್ಕ್ ಅಧ್ಯಕ್ಷತೆ ವಹಿಸಿ ಶಂಕರರ ಜೀವನದ ಬಗ್ಗೆ ಮಾತನಾಡಿದರು.
ಸಹ ಪಾಲಕರಾದ ಸಚಿನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ರೋಹಿತ್ ನಿರೂಪಿಸಿ ವಂದಿಸಿದರು.

Related posts

ಅ.8-10: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದಿಂದ ಅಂತರಾಷ್ಟ್ರೀಯ ವಿಚಾರ ಸಂಕಿರಣ

Suddi Udaya

ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಮುಂಭಾಗದಲ್ಲಿ ಧ್ವಜಾರೋಹಣ

Suddi Udaya

ಲಾಯಿಲ ಗ್ರಾ.ಪಂ. ನಲ್ಲಿ ಡಾ| ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ

Suddi Udaya

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕಾಲೇಜಿನ ಸಹಪ್ರಾಧ್ಯಾಪಕ ಈಶ್ವರ ಗೌಡ ಪಿ. ಅವರಿಗೆ ಪಿ. ಎಚ್.ಡಿ ಪದವಿ ಪ್ರದಾನ

Suddi Udaya

ಇಂದಬೆಟ್ಟು: ಕಲ್ಲಾಜೆ ನಿವಾಸಿ ಜಾನಕಿ ನಿಧನ

Suddi Udaya

ಶಕ್ತಿ ಯೋಜನೆಗೆ ಶಕ್ತಿ ತುಂಬಿದ ಪುರುಷರು

Suddi Udaya
error: Content is protected !!