ಬೆಳ್ತಂಗಡಿ: ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ನರಸಿಂಹಗಡ ನಡ ಗ್ರಾಮ ಇದರ ವತಿಯಿಂದ ನಡ ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದ ವಠಾರದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಮೇ 3 ರಿಂದ ಪ್ರಾರಂಭಗೊಂಡು ಮೇ 4ರವರೆಗೆ ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರದ ವಠಾರದಲ್ಲಿ ನಡೆಯಲಿದೆ

ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ್ ತಂತ್ರಿಗಳ ನೇತೃತ್ವದಲ್ಲಿ ತಿರುಪತಿ ದೇವಸ್ಥಾನದ ಅರ್ಚಕರಾದ ಡಾ. ಯನ್. ತನುಜಾ ವಿಷ್ಣುವರ್ಧನ್ ಮೆರವಣಿಗೆಗೆ ಚಾಲನೆ ನೀಡಿದರು.

ನಂತರ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದಿಂದ ವಿವಿಧ ಭಜನಾ ತಂಡಗಳೊಂದಿಗೆ ವೈಭವೋಪೇತ ಮೆರವಣಿಗೆಗೆ ನಡೆಯಿತು.

ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು ಧನಂಜಯ ಅಜ್ರಿ ನಡಗುತ್ತು, ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ಪುಷ್ಪರಾಜ್ ಶೆಟ್ಟಿ ಉದ್ಯಮಿ, ಶಶಿಕಾಂತ್ ಕಾಮತ್ ನಡ, ವಸಂತ ಶೆಟ್ಟಿ ಶ್ರದ್ಧಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಭಾರತೀಯ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಆರೋಗ್ಯ ಸಮಿತಿ ಸಂಚಾಲಕ ಡಾ. ಶಿವರಾಜ್ ಪಜಿಲ, ಉಪಾಧ್ಯಕ್ಷ ಲಕ್ಷ್ಮಣ ಗೌಡ ಇಂದಬೆಟ್ಟು,ಅಜಿತ್ ಕುಮಾರ್ ಜೈನ್ ಇಂದಬೆಟ್ಟುಗುತ್ತು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಡಾ| ಪ್ರದೀಪ್ ನಾವೂರು, ಉಪಾಧ್ಯಕ್ಷ ಅಜಿತ್ ಆರಿಗಾ, ಪ್ರಧಾನ ಕಾರ್ಯದರ್ಶಿ ಕರುಣಾಕರ ಗೌಡ ಬೋಜಾರ, ಕೋಶಾಧಿಕಾರಿಗಳಾದ ಪುರುಷೋತ್ತಮ್ ಶೆಣೈ, ಚೆನ್ನ ಕೇಶವ ಗೌಡ ಬೋಜಾರ, ಸಮಿತಿ ಪ್ರಧಾನ ಸಂಚಾಲಕ ನವೀನ್ ನೆರಿಯ, ಸಮಿತಿಯ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.