26.8 C
ಪುತ್ತೂರು, ಬೆಳ್ತಂಗಡಿ
May 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲಾಯಿಲ: ಕುಂಟಿನಿಯಲ್ಲಿ ಮರ್ಹೂಂ ಸಾಹುಲ್ ಹಮೀದ್ ಉಜಿರೆ ರವರಿಗೆ ಮನೆ ಹಸ್ತಾಂತರ

ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಟಿನಿ ಬ್ರಾಂಚ್ ಸಮಿತಿ ಹಾಗೂ ಅವರ ಕುಟುಂಬದ ದಾನಿಗಳ ಸಹಕಾರದೊಂದಿಗೆ ಲಾಯಿಲ ಗ್ರಾಮದ ಕುಂಟಿನಿಯಲ್ಲಿ ನಿರ್ಮಿಸಿದ ಮನೆಯನ್ನು ಉಜಿರೆ ಬ್ಲಾಕ್ ಅಧ್ಯಕ್ಷ ಮೊಹಮ್ಮದ್ ಅಲಿ ಅವರ ಸಮ್ಮುಖದಲ್ಲಿ ಮರ್ಹೂಂ ಸಾಹುಲ್ ಹಮೀದ್ ಉಜಿರೆ ರವರ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.

ಅಲ್ ಬುಖಾರಿ ಜುಮ್ಮಾ ಮಸೀದಿ ಕುಂಟಿನಿ ಖತೀಬರಾದ ಖಾದರ್ ಅಲ್ ಹಿಕಮಿ ಅವರು ದುವಾ ಆಶಿರ್ವಾದಗೈದರು. ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಉದ್ಘಾಟನೆ ಮಾಡಿದರು.

ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಮನೆ ಕೀ ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡಿದರು. ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜಾತ್ತೂರು, ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಮನೆ ನಿರ್ಮಾಣ ಕ್ಕೆ ಸಹಕರಿಸಿದ ಅಬೂಬಕ್ಕರ್ ಮೇಸ್ತ್ರಿ ಕುಂಟಿನಿ ಹಾಗೂ ಪಕ್ಷದ ಕಾರ್ಯಕರ್ತ ಸಲೀಂ ಇವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ, ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಕುಂಟಿನಿ ಮಸೀದಿ ಅಧ್ಯಾಪಕರು ಫಾರೂಕ್ ಸಅದಿ, ಮಸೀದಿ ಅಧ್ಯಕ್ಷರಾದ ಹುಸೈನ್ ತಂಗಳ್, SB ಹಮೀದ್ ಉದ್ಯಮಿಗಳು, ಪಂಚಾಯತ್ ಸದಸ್ಯರಾದ ಮುಸ್ತಾಫ ಜಿ.ಕೆರೆ, ಸಲೀಂ ಕುಂಟಿನಿ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಜಮಾತ್ ಬಾಂಧವರು ಉಪಸ್ಥಿತರಿದ್ದರು.

Related posts

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಜಾಗೃತಿ ಸಪ್ತಾಹ ಕಾರ್ಯಕ್ರಮ

Suddi Udaya

ನೆರಿಯದ ಯುವತಿ ಮಂಗಳೂರಿನಲ್ಲಿ ಆತ್ಮಹತ್ಯೆ

Suddi Udaya

ಬಳಂಜ.ಬದಿನಡೆ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ: ಧಾರ್ಮಿಕ ಸಭೆ

Suddi Udaya

ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ನೇಮಕ

Suddi Udaya

ನಾವೂರು: ಕುಂಬಾರ ಸ್ವಜಾತಿ ಬಾಂಧವರ ಮುಕ್ತ ಕಬಡ್ಡಿ ಪಂದ್ಯಾಟ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!