37.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಮೇ 16: ಎಮ್.ಆರ್.ಪಿ.ಎಲ್ ಹಾಗೂ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆ, ಬಿ.ವಿ.ಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಇವರ ಆಶ್ರಯದಲ್ಲಿ ” ಉಚಿತ ಆರೋಗ್ಯ ತಪಾಸಣೆ ಶಿಬಿರ

ನೆರಿಯ: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಹಾಗೂ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆ, ಬಿ.ವಿ.ಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ “ಜನಜಾತಿಯ ಗೌರವ ದಿವಸ್.”
ವನವಾಸಿ ಜನನಾಯಕ ಅಪ್ರತಿಮ ದೇಶಭಕ್ತ “ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಗೌರವ ಸ್ಮರಣಾರ್ಥ”. “ಉಚಿತ ಆರೋಗ್ಯ ತಪಾಸಣೆ ಶಿಬಿರ”ವು ಮೇ 16 ರಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:30 ರವರೆಗೆ ಸಮುದಾಯ ಭವನ ಬಾಂಜಾರುನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ| ರುಡಾಲ್ಫ್ ನೊರೊನ್ಹಾ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆ ಆಡಳಿತ ನಿರ್ದೇಶಕರು ಡಾ.ಮುರಳಿಕೃಷ್ಣ ಇರ್ವತ್ರಾಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಡಾ.ವಂದನಾ ಎಂ ಇರ್ವತ್ರಾಯ, ನೆರಿಯ ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಬಿ.ಎಸ್, ನವೀನ್ ಬಿ.ಎಸ್ ಬಾಂಜಾರು ಭಾಗವಹಿಸಲಿದ್ದಾರೆ.


ಶಿಬಿರದ ಉಚಿತ ಸೌಲಭ್ಯ ಗಳು:
ತಜ್ಞವೈದ್ಯರ (ಫಿಸಿಶಿಯನ್) ತಪಾಸಣೆ ಮತ್ತು ಸೂಕ್ತ ಸಲಹೆ., ರಕ್ತದೊತ್ತಡ (BP) ತಪಾಸಣೆ, ಹಿಮೋಗ್ಲೋಬಿನ್ (HB)ತಪಾಸಣೆ,
ಮಧುಮೇಹ (RBS)ತಪಾಸಣೆ, ಇಸಿಜಿ (ECG), ಶ್ವಾಸಕೋಶದ ತಪಾಸಣೆ, ಜೀವನ ಶೈಲಿ ಮತ್ತು ಪಥ್ಯ ಆಹಾರ ಬಗ್ಗೆ ಸಮಾಲೋಚನೆ.

ಶಿಬಿರದಲ್ಲಿ ಭಾಗವಹಿಸುವ ಮುಖ್ಯ ತಜ್ಞವೈದ್ಯರುಗಳಾದ ಡಾ‌.ಮುರಳಿಕೃಷ್ಣ ಇರ್ವತ್ರಾಯ, ಡಾ.ವಂದನಾ ಎಂ ಇರ್ವತ್ರಾಯ, ಡಾ.ಅಲ್ಬಿನ್ ಜೋಸೆಫ್, ಡಾ.ಮೌಲ್ಯ.

ಹೆಚ್ಚಿನ ವಿವರಗಳಿಗೆ:9483525100/8762540383

Related posts

ಮಂಜುಶ್ರೀ ಮುದ್ರಣಾಲಯದ ಮೇಲ್ವಿಚಾರಕ ವಿಶ್ವನಾಥ ಶೆಟ್ಟಿಯವರಿಗೆ ಬೀಳ್ಕೊಡುಗೆ

Suddi Udaya

ಸಾಂಸ್ಕೃತಿಕ ಸ್ಪರ್ಧೆ: ನಡ ಸರಕಾರಿ ಪ.ಪೂ. ಕಾಲೇಜಿಗೆ ರನ್ನರ್ಸ್ ಆಫ್ ಪ್ರಶಸ್ತಿ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಪೆರಾಡಿ ಸಹಕಾರಿ ಸಂಘಕ್ಕೆ ಉತ್ತಮ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಆಲಿಕುಂಞಿ ನಾಮಪತ್ರ ಸಲ್ಲಿಕೆ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಕನ್ಯಾಡಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ದೇಣಿಗೆ

Suddi Udaya

ಕಾಂಗ್ರೆಸ್ ಕಾರ್ಯಕರ್ತ ಯೋಗೀಶ್ ಗೌಡ ನೂಜಿಲ ಬಿಜೆಪಿಗೆ ಸೇರ್ಪಡೆ

Suddi Udaya
error: Content is protected !!