ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜೇಸಿಂತ ಮೋನಿಸ್(65ವ)ರವರು ಮೇ. 5ರಂದು ನಿಧಾನರಾಗಿದ್ದು ಮೃತರ ಅಂತ್ಯ ಕ್ರಿಯೆಯು ಮೇ. 7ರಂದು ನಡೆಯಲಿದೆ.
ನಾಳೆ 11ಗಂಟೆಗೆ ಮನೆಯಲ್ಲಿ ಪ್ರಾರ್ಥನಾ ವಿಧಿ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 3ಗಂಟೆಗೆ ಮನೆಯಿಂದ ಹೊರಟು 3.30ಕ್ಕೆ ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದೆ. 4ಗಂಟೆಗೆ ದಿವ್ಯ ಬಲಿ ಪೂಜೆಯೊಂದಿಗೆ ಬಳಿಕ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಪುತ್ರಿ ಶೈನಿ ಕಾರ್ಡೊಜಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.