May 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮಡಿಕೇರಿಯಲ್ಲಿ ನೂತನ ಮುಳಿಯ ಸಿಲ್ವರಿಯ ಉದ್ಘಾಟನೆ

ಮಡಿಕೇರಿಯ ಮುಳ್ಯ ಗೋಲ್ಡನ್ ಅಂಡ್ ಡೈಮಂಡ್ ಇದರ ನೂತನ ಚಿನ್ನ ಮತ್ತು ಬೆಳ್ಳಿ ಆಭರಣಗಳ ವಿಸ್ಕೖತ ಮಳಿಗೆಯಾದ ಸಿಲ್ವರಿಯಾವನ್ನು ಉದ್ಘಾಟಿಸಿ ಮಾತನಾಡಿದ ರಮೇಶ್ ಅರವಿಂದ್ ತಾನಿಂದು ಬ್ರಹ್ಮಗಿರಿ ತಪ್ಪಲಿನ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಆ ಬಳಿಕ ಕಾವೇರಿ ತೀಥ೯ವನ್ನು ಮಡಿಕೇರಿಯ ಮುಳಿಯ ಸಂಸ್ಥೆಗೆ ತಂದು ವಿದ್ಯುಕ್ತವಾಗಿ ಕಾವೇರಿ ತೀಥ೯ವನ್ನು ಮಳಿಗೆಗೆ ಪ್ರೋಕ್ಷಣೆ ಮಾಡಿದೆ. ನಿಜಕ್ಕೂ ಇದೊಂದು ಅಪೂವ೯ ಅನುಭವ ಎಂದು ಬಣ್ಣಿಸಿದರು. ಉದ್ಘಾಟನಾ ಕಾಯ೯ಕ್ರಮವೊಂದು ಯಾವ ರೀತಿ ವಿನೂತನವಾಗಿರಬೇಕೆಂಬುದಕ್ಕೆ ಮುಳಿಯ ಸಂಸ್ಥೆಯ ನೂತನ ಮಳಿಗೆಯ ಉದ್ಘಾಟನೆಯೇ ಸಾಕ್ಷಿ ಎಂದೂ ರಮೇಶ ಹೇಳಿದರು.

ತಾನು ಪ್ರಥಮ ಬಾರಿಗೆ 31 ವಷ೯ಗಳ ಹಿಂದೆ ಚಿತ್ರೀಕರಣಕ್ಕಾಗಿ ಕ್ಯಾಮರ ಎದುರಿಸಿದ್ದೇ ಕೊಡಗಿನ ಹರದೂರು ಗ್ರಾಮದ ಸೇತುವೆಯಲ್ಲಿ ಎಂದು ಮೌನ ಗೀತೆ ಚಿತ್ರೀಕರಣ ಸಂದಭ೯ವನ್ನೂ ರಮೇಶ್ ಸ್ಮರಿಸಿಕೊಂಡರು. ಪ್ರಕೖತ್ತಿ ರಮಣೀಯ ಕೊಡಗಿಗೆ ತಾನು ಅನೇಕ ಸಲ ಬಂದಿದ್ದೇನೆ. ಅನೇಕ ಚಿತ್ರಗಳು ಕೊಡಗಿನಲ್ಲಿ ಚಿತ್ರೀಕರಣವಾಗಿದೆ. ಈ ಭೂಮಿ ತನ್ನ ಪಾಲಿಗೆ ಭಾಗ್ಯದಾಯಕವಾಗಿದೆ ಎಂದೂ ರಮೇಶ್ ಹೇಳಿದರು.

ರಾಜಮಹಾರಾಜರ ಆ ಕಾಲದಿಂದ ಈ ಕಾಲದವರೆಗೂ ಮಾನವನ ಸೌಂದಯ೯ಕ್ಕೆ ಮೆರುಗು ನೀಡಿದ್ದೇ ಆಭರಣಗಳು ಎಂದು ಹೇಳಿದ ರಮೇಶ್ ಅರವಿಂದ್ ಇದೀಗ ತಾನು ಸೌಂದಯ೯ದ ಪ್ರತೀಕವಾದ ಮುಳಿಯ ಚಿನ್ನಾಭರಣ ಸಂಸ್ಥೆಯ ರಾಯಬಾರಿಯಾಗಿದ್ದು ಹೆಮ್ಮೆ ತಂದಿದೆ ಎಂದೂ ಹೇಳಿದರು.

ಮೊದಲು ನಮ್ಮೊಳಗೆ ಸಂತೋಷವನ್ನು ಕಂಡುಕೊಳ್ಳಬೇಕು. ಆಗ ಮನಸ್ಸಿನ ಸಂಭ್ರಮ ಇಮ್ಮಡಿಗೊಳ್ಳುತ್ತದೆ. ಇದನ್ನೇ ಮುಳಿಯ ಸಂಸ್ಥೆಯು ಸಂತೋಷಕ್ಕಾಗಿ ಮುಳಿಯಕ್ಕೆ ಬನ್ನಿ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಸ್ತುತಪಡಿಸಿದೆ ಎಂದೂ ರಮೇಶ್ ಅರವಿಂದ್ ಹೇಳಿದರು.

ಮುಳಿಯ ಸಂಸ್ಥೆಯ ಚೇರ್ಮನ್ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಮುಳಿಯ ಸಂಸ್ಥೆಯು ಚಿನ್ನಾಭರಣಗಳ ತಯಾರಿಕೆಯಲ್ಲಿ 81 ವಷ೯ಗಳನ್ನು ಪೂರೈಸಿದೆ. ಈ ಸುಧೀಘ೯ ಹಾದಿಯಲ್ಲಿ ಸದಾ ಗ್ರಾಹಕರ ವಿಶ್ವಾಸವನ್ನು ತನ್ನದಾಗಿಸಿಕೊಂಡಿದೆ. ಹಾಗೆಯೇ ಹಲೋ ಹೊಸತನಗಳನ್ನು ಪ್ರಸ್ತುತ ಅಡಿಸುತ್ತದೆ ಎಂದರು. ಬಾರತದಲ್ಲಿಯೇ ಮೊದಲ ಬಾರಿಗೆ ಮುಳಿಯ ಸಂಸ್ಥೆಯಲ್ಲಿ ಗ್ರಾಹಕರ ಎದುರಲ್ಲೇ ಚಿನ್ನ, ವಜ್ರ ಮತ್ತು ಬೆಳ್ಳಿಯ ನಿಖರತೆ ಪತ್ತೆ ಹಚ್ಚುವ ಯಂತ್ರವನ್ನು ಸ್ಥಾಪಿಸಲಾಗಿದೆ ಎಂದು ಕೇಶವ ಪ್ರಸಾದ್ ಹೇಳಿದರು. ಪ್ರತೀ ಬ್ರಾಂಡ್ ಗೆ ಒಂದು ವ್ಯಕ್ತಿತ್ವ ಇದೆ. ಅಂಥ ವ್ಯಕ್ತಿತ್ವಕ್ಕೆ ನಿಕಟವಾಗಿರುವ ವ್ಯಕ್ತಿಯೇ ಆಯಾ ಸಂಸ್ಥೆಗೆ ಬ್ರಾಂಡ್ ಅಂಬಾಸಿಡರ್ ಆಗಿರುತ್ತಾರೆ ಎಂದು ರಮೇಶ್ ಅರವಿಂದ್ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದ ಕಾರಣ ವಿವರಿಸಿದರು.

ಮುಳಿಯ ಸಂಸ್ಥೆಯ ಮಾರುಕಟ್ಟೆ ಸಲಹೆಗಾರ ವೇಣು ಶಮ೯ ಮಾಹಿತಿ ನೀಡಿ, ಮುಳಿಯ ಸಂಸ್ಥೆಯು ಚಿನ್ನಾಭರಣಗಳ ವಹಿವಾಟನ್ನು ಕೇವಲ ವ್ಯಾಪಾರಕ್ಕಾಗಿ ಮಾತ್ರ ಪರಿಗಣಿಸದೇ ಅದನ್ನು ಸಾಮಾಜಿಕ ಬದ್ದತೆಯಿಂದಲೂ ಕಾಣುತ್ತಿದೆ ಎಂದು ಹೇಳಿದರು.

ಗುರುಪ್ರಿಯ ನಾಯಕ್ ಪ್ರಾಥಿ೯ಸಿ ಮಡಿಕೇರಿ ಶಾಖಾ ವ್ಯವಸ್ಥಾಪಕ ತೀತಿಮಾಡ ಸೋಮಣ್ಣ ಸ್ವಾಗತಿಸಿ, ಕೖಷ್ಣವೇಣಿ ಮುಳಿಯ ವಂದಿಸಿದರು. ಬಿಗ್ ಬಾಸ್ ರಿಯಾಲಿಟಿ ಶೋ ಹಿನ್ನೆಲೆ ಧ್ವನಿ ನೀಡಿರುವ ಬಡಕಿಲ ಪ್ರದೀಪ್ , ಮುಳಿಯ ಸಂಸ್ಥೆಯ ವ್ಯವಸ್ಥಾಪಕ ನಿದೇ೯ಶಕ ಕೖಷ್ಣ ನಾರಾಯಣ ಮುಳಿಯ, ಅಶ್ವಿನಿ ಮುಳಿಯ, ಆದ್ಯ ಮುಂತಾದವರು ಉಪಸ್ಥಿತರಿದ್ದರು . ರಮೇಶ್ ಅರವಿಂದ್ ಅವರನ್ನು ತೆರೆದ ವಾಹನದಲ್ಲಿ ಮಧ್ಯಗಳ ಸಮೇತ ಬರಮಾಡಿಕೊಳ್ಳಲಾಯಿತು.

Related posts

ಗುರುವಾಯನಕೆರೆ: ಸುಧಾಕರ ನಾಯಕ್ ನಿಧನ

Suddi Udaya

ಮಚ್ಚಿನ ಹಿಂದೂ ರುದ್ರಭೂಮಿ ಸಮಿತಿಯ ಸದಸ್ಯರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರಿಂದ ಸ್ವಚ್ಚತಾ ಕಾರ್ಯ

Suddi Udaya

ಬೆಳ್ತಂಗಡಿ ನಿವಾಸಿ ಪದ್ಮಲತಾ ನಿಧನ

Suddi Udaya

ವೇಣೂರು ಭಾರತಿ ಶಿಶುಮಂದಿರದಲ್ಲಿ ಭಗವದ್ಗೀತೆಯ ಕಲಿಕಾ ತರಗತಿ ಉದ್ಘಾಟನೆ

Suddi Udaya

ಭಾರತೀಯ ರಿಸರ್ವ್ ಬ್ಯಾಂಕಿನಿಂದ ಸೇವಾಭಾರತಿಗೆ ಅಂಬ್ಯುಲೆನ್ಸ್ ಕೊಡುಗೆ

Suddi Udaya

ಜೂ.18-23: ಉಜಿರೆಯಲ್ಲಿ ಬೆಂಗಳೂರು ಜೀವನ ಕಲೆ ಪ್ರತಿಷ್ಠಾನ ಸಂಸ್ಥೆ ವತಿಯಿಂದ ‘ಆನಂದೋತ್ಸವ ಶಿಬಿರ’

Suddi Udaya
error: Content is protected !!