26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಗುರುವಾಯನಕೆರೆ: ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಗುರುವಾಯನಕೆರೆ: ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಪ್ರತಿ ವರ್ಷದಂತೆ ಟ್ರಸ್ಟ್ ಕಚೇರಿಯಲ್ಲಿ ಜೂನ್ 5ರಂದು ಆಚರಿಸಲಾಯಿತು.

ದ.ಕ. ಪರಿಸರಾಸ್ತಕರ ಒಕ್ಕೂಟದ ಮಾಜಿ ಅಧ್ಯಕ್ಷ, ನಾಟಿ ವೈದ್ಯ ಐ. ಕುಶಾಲಪ್ಪ ಗೌಡ ಗಿಡಮೂಲಿಕೆಗಳ ಔಷಧೀಯ ಗುಣಗಳ ಕುರಿತು ಮಾಹಿತಿ ನೀಡಿ, ಮನೆಗೆ ಬೇಕಾದ ತರಕಾರಿಯನ್ನು ಮನೆಯ ಸುತ್ತ ಕಡಿಮೆ ಸ್ಥಳದಲ್ಲಿ ಬೆಳೆಸುವ ಸರಳ ವಿಧಾನ ವಿವರಿಸಿದರು.

ಟ್ರಸ್ಟ್‌ನ ಉಪಾಧ್ಯಕ್ಷೆ, ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷೆ ವಿದ್ಯಾ ನಾಯಕ್ ವಿಶ್ವ ಪರಿಸರ ದಿನಾಚರಣೆಯ ಈ ವರ್ಷದ ಥೀಮ್ ಭೂಮಿ ಪುನಃ ಸ್ಥಾಪನೆ, ಮರುಭೂಮಿ ಮತ್ತು ಬರ ಸ್ಥಿತಿ ಸ್ಥಾಪಕತ್ವ ಇದರ ಬಗ್ಗೆ ಮಾತನಾಡಿದರು.

ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಸಭಾಧ್ಯಕ್ಷತೆ ವಹಿಸಿದ್ದರು.

ಟ್ರಸ್ಟಿ ಸದಾಶಿವ ಹೆಗ್ಡೆ ಸ್ವಾಗತಿಸಿದರು. ದಲಿತ ಮುಖಂಡ ಎಂ.ಬಿ. ಕರಿಯ ವಂದಿಸಿದರು. ಟ್ರಸ್ಟ್ ಮೆನೇಜರ್ ಬಾಬು ಎ. ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ: ಕುಣಿತ‌ ಭಜನಾ ತರಬೇತುದಾರರ ‌ತಂಡದ‌ “ಭಜೋರೆ‌ ಮಾರುತಿ‌” ನೂತನ‌‌ ಲಾಂಚನ ಬಿಡುಗಡೆ

Suddi Udaya

ಚಲನಚಿತ್ರ ತಾರೆ ಡಿಂಪಲ್‌ ಕಪಾಡಿಯಾ ಧರ್ಮಸ್ಥಳ ಭೇಟಿ

Suddi Udaya

ಶಿಶಿಲ: ಮುಚ್ಚಿರಡ್ಕ ನಿವಾಸಿ ನೀಲಮ್ಮ ನಿಧನ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಣಿಯೂರು ವಲಯದ ಮೈರೋಲ್ತಡ್ಕ, ಮೊಗ್ರು, ಬಂದಾರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಮಚ್ಚಿನದಲ್ಲಿ ಚಿರತೆ ಓಡಾಟ: ಜನರಲ್ಲಿ ಆತಂಕ

Suddi Udaya

ಬೆಳ್ತಂಗಡಿ: ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಪಂಪ್‌ಸೆಟ್‌ಗಳು ಮತ್ತು ನೀರಿನ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!