ಬೆಳ್ತಂಗಡಿ:ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಮಾಡಿ,ಅರ್ಪಣಾ ಭಾವದಿಂದ ಸಮಾಜ ಸೇವೆ ಮಾಡುತ್ತಿರುವ ಡಾ. ರವಿ ಪೂಜಾರಿ ಕಕ್ಕೆಪದವು ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಇವರ ಸಮಾಜ ಸೇವೆಯನ್ನು ಪರಿಗಣಿಸಿ ರಾಜ್ಯಮಟ್ಟದ ಕಾಯಕ ಯೋಗಿ- 2025 ಪ್ರಶಸ್ತಿ ನೀಡಿ ಗೌರವಿಸಿದೆ.

ಮೇ 1 ರಂದು ಬಾಗಲಕೋಟೆಯ ಶ್ರೀ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ರವಿ ಪೂಜಾರಿ ಕಕ್ಯಪದವು ಪ್ರಶಸ್ತಿ ಸ್ವೀಕರಿಸಿದರು.
ಡಾ. ರವಿ ಪೂಜಾರಿ ಕಕ್ಯಪದವು ಅವರು ಸುಬ್ರಹ್ಮಣ್ಯದಲ್ಲಿ ಸಮಾಜ ಸೇವಾ ಸಂಘಟನೆಯನ್ನು ಕಟ್ಟಿಕೊಂಡು ಬಡವರಿಗೆ,ನಿರ್ಗತಿಕರಿಗೆ,ಸಮಸ್ಯೆಗೊಳಗಾದವರನ್ನು ಸಂತೈಸುವ ಕೆಲಸ ಮಾಡುತ್ತಿದ್ದಾರೆ. ಮನೆ ಕಳೆದುಕೊಂಡ ಹಲವಾರು ಮಂದಿಗೆ ಸ್ವಂತ ಜಾಗ ನೀಡಿ, ಅವರಿಗೆ ಮನೆ ನಿರ್ಮಿಸಿ ಕೊಟ್ಟು ಒರ್ವ ನಿಜವಾದ ಸಮಾಜಸೇವಕರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.
ತಾನು ವಿದ್ಯೆ ಕಲಿಯದಿದ್ದರು,ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆವಿದ್ದ ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕೆಲಸವನ್ನು ರವಿ ಪೂಜಾರಿಯವರು ಮಾಡುತ್ತಿರುವುದು ಶ್ಲಾಘನೀಯವಾದುದು.
ಇವರ ಸಮಾಜ ಸೇವೆಗೆ ಜೆಸಿಐ,ರೋಟರಿ,ಲಯನ್ಸ್ ಕ್ಲಬ್, ಸಂಘ ಸಂಸ್ಥೆಗಳು ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಸಮ್ಮಾನ ನೀಡಿ ಗೌರವಿಸಿದೆ.