
ಉಜಿರೆ: ನಿವೃತ್ತ ಶಿಕ್ಷಕಿ ಉಜಿರೆ ಗ್ರಾಮದ ಶಿವಾಜಿನಗರ ನಿವಾಸಿ ಶಕುಂತಳ ಕಾರoತ (74ವ) ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಇಬ್ಬರು ಪುತ್ರರು ಸುಭಾಷ್ ಕಾರಂತ್ ಮತ್ತು ವಿನೋಬಾ ಕಾರಂತ್, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಇದ್ದಾರೆ.
ಉಜಿರೆ ಹಳೆಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರ್ನೋಡಿ ಶಾಲೆ ಹಾಗೂ ಕಲ್ಮಂಜ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಉಜಿರೆಯ ಶಿವಾಜಿನಗರದಲ್ಲಿ ಅವರು ವಾಸ್ತವ್ಯ ಇದ್ದರು.
ಭಾನುವಾರ ಸಂಜೆ ಅವರ ಅಂತ್ಯ ಸಂಸ್ಕಾರವನ್ನು ಮನೆಯ ಬಳಿ ನಡೆಸಲಾಯಿತು.