May 13, 2025
ಸಂಘ-ಸಂಸ್ಥೆಗಳು

ಅನಿಯಮಿತ ವಿದ್ಯುತ್: ವ್ಯಾಪಾರಸ್ಥರಿಗೆ ಸಂಕಷ್ಟವರ್ತಕರ ಸಂಘದಿಂದ ಮೆಸ್ಕಾಂ ಇಲಾಖೆಗೆ ಮನವಿ

ಅನಿಯಮಿತ ವಿದ್ಯುತ್: ವ್ಯಾಪಾರಸ್ಥರಿಗೆ ಸಂಕಷ್ಟ
ವರ್ತಕರ ಸಂಘದಿಂದ ಮೆಸ್ಕಾಂ ಇಲಾಖೆಗೆ ಮನವಿ

ಬೆಳ್ತಂಗಡಿ: ಕಳೆದ ಕೆಲವು ಸಮಯದಿಂದ ಅನಿಯಮಿತವಾಗಿ ವಿದ್ಯುತ್ ಹಲವು ಬಾರಿ ಕಡಿತವಾಗಿರುವುದಿಂದ ನಗರದ ವ್ಯಾಪಾರ ವ್ಯವಹಾರ ಮಾಡುವ ವರ್ತಕರಿಗೆ ಈ ಸಮಸ್ಯೆಯಿಂದ ಬಹಳಷ್ಟು ಕಷ್ಟ ನಷ್ಟಗಳಿಗೆ ಒಳಗಾಗುವ ನಿಟ್ಟಿನಲ್ಲಿ ಬೆಳ್ತಂಗಡಿ ಮೆಸ್ಕಾಂನ ಎಇ ಹಾಗೂ ಜೆಇ ಯವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಯಿತು.


ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಫೀಡರ್ ಅಳವಡಿಸಿ ಈ ಸಮಸ್ಯೆಗೆ ಮುಕ್ತಿ ನೀಡಬೇಕಾಗಿ ಕೋರಿಕೆ ಮಾಡಲಾಯಿತು. ಜೆಇ ಹಾಗೂ ಎಇ ಯವರು ಇನ್ನು ಮುಂದಕ್ಕೆ ಇಂತಹ ಸಮಸ್ಯೆಯಾಗದಂತೆ ಕ್ರಮವಹಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಮುಂದಿನ ವಾರ ಮಂಗಳೂರಿನಿಂದ ಅಧಿಕಾರಿಗಳು ಬರುವಾಗ ನಮ್ಮನ್ನು ಆಮಂತ್ರಿಸಿ ಖುದ್ದು ಅವರನ್ನು ಭೇಟಿ ಮಾಡಿಸುವುದಾಗಿ ತಿಳಿಸಿದ್ದಾರೆ. ವರ್ತಕರ ಸಂಘದ ಅಧ್ಯಕ್ಷರಾದ ರೊನಾಲ್ಡ್ ಲೋಬೋ ಕಾರ್ಯದರ್ಶಿ ಲ್ಯಾನ್ಸಿ ಎ. ಪಿರೇರಾ, ನಿಕಟ ಪೂರ್ವ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ವಿನ್ಸೆಂಟ್ ಡಿ. ಸೋಜ, ಶಶಿಧರ್ ಪೈ, ಶೀತಲ್ ಜೈನ್ ಹಾಗೂ ಅಶೋಕ್ ಲಾಯಿಲ ಉಪಸ್ಥಿತರಿದ್ದರು.

Related posts

ರಾಜ್ಯೋತ್ಸವ ಪ್ರಶಸ್ತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಗೆ ದಯಾ ವಿಶೇಷ ಶಾಲೆಯ ವತಿಯಿಂದ ಗೌರವಾರ್ಪಣೆ

Suddi Udaya

ಶಿಬಾಜೆಯ ಬರ್ಗುಲಾದಲ್ಲಿ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಯವರಿಗೆ. ಮಂಗಳೂರು ಬಂಟರ ಮಾತೃ ಸಂಘ ದಿಂದ ಚೆಕ್ ವಿತರಣೆ

Suddi Udaya

ಪರಸ್ಪರ ಯುವಕ ಮಂಡಲ ಈದು-ನಾರಾವಿ ನೇತೃತ್ವದಲ್ಲಿ ನಡೆಯುವ ಮಹಾಚಂಡಿಕಾ ಯಾಗದ ಪೋಸ್ಟರ್ ಬಿಡುಗಡೆ

Suddi Udaya

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ : ವೀಲ್ ಚೇರ್ ಹಸ್ತಾಂತರ

Suddi Udaya

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ

Suddi Udaya

ಬಾರ್ಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ

Suddi Udaya
error: Content is protected !!