ಉಜಿರೆ: ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೇ 12 ರಿಂದ ಮೇ 16ರವರೆಗೆ ನಡೆಯಲಿರುವ ಮೂರನೇ ಅಂತರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ -೨೦೨೫ರ ಮಹಾಸಮ್ಮೇಳನ , ಇದರ ಉದ್ಘಾಟನಾ ಸಮಾರಂಭವು ಮೇ 12ರಂದು ನಡೆಯಿತು.
ಮೂರನೇ ಅಂತರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾ ಸಮ್ಮೇಳನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ಉದ್ಘಾಟಿಸಿ, ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಆತಿಥಿಗಳಾಗಿ ಬೆಂಗಳೂರು ಎಸ್‌ವಿವೈಎಎಸ್‌ಎ ವಿಶ್ವವಿದ್ಯಾಲಯ ಕುಲಪತಿ ಡಾ. ಹೆಚ್. ಆರ್ ನಾಗೇಂದ್ರ, ಸಂಸದ ಕ್ಯಾ. ಬ್ರಿಜೇಶ್ ಚೌಟ, ನವದೆಹಲಿ ಯೋಗ ಹಾಗೂ ಪ್ರಕೃತಿ ವೈದ್ಯ ಸಂಶೋಧನಾ ಕೇಂದ್ರಾಡಳಿತ ಸಂಸ್ಥೆ ಆಯುಷ್ ಸಚಿವಾಲಯದ ನಿರ್ದೇಶಕ ಡಾ. ರಾಘವೇಂದ್ರ ರಾವ್, ಭಾರತೀಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪದವೀಧರರ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ನವೀನ್ ಕೆ.ವಿ. ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾಯ೯ದಶಿ೯ ಡಿ. ಹರ್ಷೇಂದ್ರ ಕುಮಾರ್, ಪ್ರಾಚಾರ್ಯ ಡಾ.ಪ್ರಶಾಂತ ಶೆಟ್ಟಿ, ಬಾಬು ಜೋಸೆಫ್ , ಮಂಜುನಾಥ ಎಂ.ಕೆ , ಡಾ. ಪ್ರಶಾಂತ ಶೆಟ್ಟಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ನಿದೇ೯ಶಕ ಡಿ.ಶ್ರೇಯಸ್ ಕುಮಾರ್ ಭಾಗವಹಿಸಿದ್ದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾಯ೯ದಶಿ೯ ಡಾ.ಸತೀಶ್ಚಂದ್ರ ಎಸ್.ಸ್ವಾಗತಿಸಿದರು. ಡಾ.ಬಿಂದು, ಡಾ.ದೀಪಿಕಾ , ಅನನ್ಯ, ಪ್ರತೀಕ್ಷಾ ಕಾಯ೯ಕ್ರಮ ನಿರೂಪಿಸಿದರು.